Sunday, April 28, 2024
Homeಕರಾವಳಿಉಡುಪಿಉಡುಪಿಯಲ್ಲೊಂದು ಸ್ಪೆಷಲ್ ಮದುವೆ ; ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ವಧು-ವರ; ಮಂಟಪದಲ್ಲೇ ನಡೆಯಿತು ಕೋಳಿ ಅಂಕ

ಉಡುಪಿಯಲ್ಲೊಂದು ಸ್ಪೆಷಲ್ ಮದುವೆ ; ಜೆಸಿಬಿಯಲ್ಲಿ ಎಂಟ್ರಿ ಕೊಟ್ಟ ವಧು-ವರ; ಮಂಟಪದಲ್ಲೇ ನಡೆಯಿತು ಕೋಳಿ ಅಂಕ

spot_img
- Advertisement -
- Advertisement -

ಉಡುಪಿಯಲ್ಲಿ ನಡೆದ  ಸ್ಪೆಷಲ್ ಮದುವೆಯೊಂದು  ಇದೀಗ ಭಾರೀ ಸದ್ದು ಮಾಡುತ್ತಿದೆ. ಜೆಸಿಬಿಯಲ್ಲಿ ಮದುವೆ ಹಾಲ್ ಗೆ ಎಂಟ್ರಿ ಕೊಟ್ಟ ವಧು-ವರರು ಅಲ್ಲೇ ಮಂಟಪದಲ್ಲೇ ಕೋಳಿ ಅಂಕ ನಡೆಸಿದ್ದಾರೆ.

ಅಂದ್ಹಾಗೆ ಇಂತಹ ಸ್ಪೆಷಲ್ ಮ್ಯಾರೇಜ್ ನಡೆದಿರೋದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ. ಇಲ್ಲಿನ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭ ಎಲ್ಲಾ ಮದುವೆಗಳಿಂದ ವಿಭಿನ್ನವಾಗಿ ನಡೆದಿದೆ. ಇದಕ್ಕೆಲ್ಲಾ ಕಾರಣ ಅವರ ಸ್ನೇಹಿತರು ಎನ್ನಲಾಗಿದೆ.

ಗೆಳೆಯನ ಮದುವೆಯನ್ನು ವಿಭಿನ್ನವಾಗಿ ಮಾಡಬೇಕೆಂದು ಮಿಥುನ್ ಸ್ನೇಹಿತರೇ ಆ ಪರಿಸರಕ್ಕೆ ಹೊಸದಾದ ಕೆಲವು ಪರಿಕಲ್ಪನೆಯನ್ನು ಅನಾವರಣ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆ ಹಾಲ್‌ಗೆ ವಧು-ವರರನ್ನು ಕಾರ್‌ನಲ್ಲಿ ಕರೆತರುತ್ತಾರೆ. ಆದರೆ ಮಿಥುನ್ ಮತ್ತು ಪೂಜಾ ಜೋಡಿ ಬಂದಿದ್ದು ಜೆಸಿಬಿಯಲ್ಲಿ. ಜೆಸಿಬಿಯ ಮುಂದಿನ ಕೊಕ್ಕೆಯಲ್ಲಿ ಕುಳ್ಳಿರಿಸಿ ಜೋಡಿಯನ್ನು ಮದುವೆ ಹಾಲ್‌ನತ್ತ ಕರೆ ತರಲಾಗಿದೆ. ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಮುಂಭಾಗಕ್ಕೆ ಜೊಡಿಸಿ ಅದರಲ್ಲಿ ವರವಧು ಕುಳಿತು ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಇದು ಮದುವೆಗೆ ಬಂದಿದ್ದ ಎಲ್ಲರ ಮೊಗದಲ್ಲಿ ನಗು ತಂದಿದೆ. ಮದುವೆಗೆ ಜೆಸಿಬಿ ಬಳಸಿದ್ದೇ ವಿಭಿನ್ನವಾಗಿದೆ ಎಂದು ಮದುವೆಗೆ ಬಂದವರು ಮಾತನಾಡಿಕೊಳ್ಳುತ್ತಿರುವಾಗಲೇ ಮತ್ತೊಂದು ವಿಭಿನ್ನವಾದ ಘಟನೆ ಮಿಥುನ್ ಮತ್ತು ಪೂಜಾ ಜೋಡಿ ಮದುವೆಯಲ್ಲಿ ನಡೆದಿದೆ. ಇನ್ನು ಮದುವೆ ಶಾಸ್ತ್ರಗಳು ಮಗಿಯುತ್ತಿದ್ದಂತೆ ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಮದುವೆ ಮಂಟಪದಲ್ಲೇ ಕಾಳಗ ಮಾಡಿಸಿದ್ದಾರೆ. ವಧು ಕಡೆಯಿಂದ ಒಂದು ಕೋಳಿಯನ್ನು ಹಾಗೂ ವರನ ಕಡೆಯಿಂದ ಒಂದು ಕೋಳಿಯನ್ನು ಮದುವೆ ಮಂಟಪದಲ್ಲೇ ಕೋಳಿ ಅಂಕಣಕ್ಕೆ ಇಳಿಸಲಾಗಿದೆ. ವರ ಮಿಥುನ್‌ಗೆ ಕೋಳಿ ಅಂಕಕ್ಕೆ ಹೋಗುವ ಹವ್ಯಾಸವಿದ್ದು, ಅದಕ್ಕಾಗಿ ಗೆಳೆಯರು ಈ ಅಚ್ಚರಿ ಕೊಟ್ಟಿದ್ದಾರೆ. ಸದ್ಯ ಬ್ರಹ್ಮಾವರದ ಈ ವಿಭಿನ್ನ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

- Advertisement -
spot_img

Latest News

error: Content is protected !!