Sunday, July 19, 2026
HomeUncategorizedನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೋನಾ ಸೋಂಕು ದೃಢ

ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೋನಾ ಸೋಂಕು ದೃಢ

- Advertisement -
- Advertisement -

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೂ ಕೊರೊನಾ ಪಾಸಿಟಿವ್‌ ವಕ್ಕರಿಸಿದೆ. ಈ ಬಗ್ಗೆ ಧ್ರುವ ಸರ್ಜಾ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ನನಗೂ ನನ್ನ ಹೆಂಡತಿಗೂ ಕೋವಿಡ್‌19 ವರದಿಯಲ್ಲಿ ಪಾಸಿಟಿವ್‌ ದೃಢಪಟ್ಟಿದೆ. ಹೀಗಾಗಿ ನಾವೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನಾವೂ ಚೇತರಿಸಿಕೊಳ್ಳುತ್ತೇವೆಂಬ ನಂಬಿಕೆ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

ಕೊರೊನಾಗೆ ಸಂಬಂಧಿಸಿದ ಕೆಲವು ಲಕ್ಷಣಗಳು ನಮ್ಮಲ್ಲಿ ಕಂಡು ಬಂದಿತ್ತು. ಹೀಗಾಗಿ ಟೆಸ್ಟ್‌ ಮಾಡಿಸಿಕೊಂಡಾಗ ವರದಿ ಪಾಸಿಟಿವ್‌ ಬಂದಿದೆ ಅಂತ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಈ ಹಿಂದೆ ಚಿರಂಜೀವಿ ಸರ್ಜಾ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೂ ಪಾಸಿಟಿವ್‌ ಬಂದಿತ್ತು. ಹೀಗಾಗಿ ಅಂದು ಭಾಗಿಯಾಗಿದ್ದವರಲ್ಲಿ ಆತಂಕ ಎದುರಾಗಿತ್ತು.

- Advertisement -

Latest News

error: Content is protected !!