ಬೆಳ್ತಂಗಡಿ : ಧರ್ಮಸ್ಥಳ ಹಲವಾರು ಮೃತದೇಹ ಹೂತುಹಾಕಿದ ಆರೋಪಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ ಧನಂಜಯ್ ಹಾಗೂ ಅವರ ತಂಡದ ವಿರುದ್ದ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ.3 ರಂದು ಸಂಜೆ 5 ಗಂಟೆಗೆ ಧರ್ಮಸ್ಥಳ ಗ್ರಾಮಸ್ಥರ ಪರವಾಗಿ ರಾಜೇಂದ್ರ ಅಜ್ರಿ ದೂರು ನೀಡಿದ್ದಾರೆ.
ದೂರುದಾರ ಹಾಗೂ ಆರೋಪಿಯಾಗಿರುವ ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆವಿ ಧನಂಜಯ್ ಅವರಿಗೆ ಎಲ್ಲ ದಾಖಲೆಗಳನ್ನು ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ, ಈ ಹಿನ್ನಲೆಯಲ್ಲಿ ಕೆ.ವಿ ಧನಂಜಯ್ ಅವರ ಬಳಿ ಇರುವ ದಾಖಲೆಗಳು ಏನು ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಹೊರತರಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ದೂರಿನಲ್ಲಿ ಕೆ.ವಿ ಧನಂಜಯ ಅವರ ವಿರುದ್ದ ಹಾಗೂ ಅವರೊಂದಿಗಿದ್ದ ನ್ಯಾಯವಾದಿಗಳಾದ ಓಜಸ್ವಿ ಗೌಡ, ಸಚಿನ್ ದೇಶ್ಪಾಂಡೆ, ದಿವಿನ್ ಧೀರಜ್, ಮಂಜುನಾಥ್ ಹಾಗೂ ಇತರರ ವಿರುದ್ದ ದೂರು ನೀಡಲಾಗಿದೆ. ದೂರನ್ನು ಸ್ವೀಕರಿಸಿರುವ ಎಸ್.ಐ.ಟಿ ಈ ಬಗ್ಗೆ ತನಿಖೆ ನಡೆಸುವುದಾಗಿ ಹಿಂಬರಹ ನೀಡಿದ್ದಾರೆ ಎಂದು ದೂರುದಾರ ರಾಜೇಂದ್ರ ಅಜ್ರಿ ಮತ್ತು ಶ್ರೀನಿವಾಸ್ ರಾವ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.


