Friday, May 3, 2024
Homeಕರಾವಳಿಬೆಳ್ತಂಗಡಿ :ಐದು ಮಕ್ಕಳಿದ್ದರೂ ಅನಾಥವಾದ ತಂದೆಯ ಮೃತದೇಹ: ಮಹಾ ಎಕ್ಸ್ಪ್ರೆಸ್ ವರದಿ ನೋಡಿ ಮೃತದೇಹ ಪಡೆದ...

ಬೆಳ್ತಂಗಡಿ :ಐದು ಮಕ್ಕಳಿದ್ದರೂ ಅನಾಥವಾದ ತಂದೆಯ ಮೃತದೇಹ: ಮಹಾ ಎಕ್ಸ್ಪ್ರೆಸ್ ವರದಿ ನೋಡಿ ಮೃತದೇಹ ಪಡೆದ ಕುಟುಂಬ

spot_img
- Advertisement -
- Advertisement -

ಬೆಳ್ತಂಗಡಿ :ಐದು ಮಕ್ಕಳಿದ್ದರೂ ಅನಾಥವಾದ ತಂದೆಯ ಮೃತದೇಹ: ಮಹಾ ಎಕ್ಸ್ಪ್ರೆಸ್ ವರದಿ ನೋಡಿ ಮೃತದೇಹ ಪಡೆದ ಕುಟುಂಬ

ಬೆಳ್ತಂಗಡಿ : ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ ನಡೆದಿದ್ದು. ನಂತರ ಐದು ಮಕ್ಕಳ ತಂದೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸಕಾಲಕ್ಕೆ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ಸೇರಿ ಒಂದು ದಿನದ ಬಳಿಕ ವೃದ್ಧ ಸಾವನ್ನಪ್ಪಿದ್ದರು.ಪೊಲೀಸರು ಮನೆಯವರಿಗೆ ಕರೆ ಮಾಡಿ ಸಾವನ್ನಪ್ಪಿದ ವಿಚಾರ ತಿಳಿಸಿದರೂ ನಮಗೆ ತಂದೆ ಬೇಡ ,ನಾವು ಬರುವುದಿಲ್ಲ ಎಂದಿದ್ದರು. ಇದೀಗ ಘಟನೆ ಹಾಗೂ ಕುಟುಂಬದ ವಿವರ ಸಮೇತ ಮಹಾ ಎಕ್ಸ್‌ಪ್ರೆಸ್ ವೆಬ್ ಸೈಟ್ ಮೊದಲು ವರದಿ ಮಾಡಿದ್ದು. ವಿಚಾರ ಮನೆಯವರಿಗೆ ತಿಳಿದು ಕೊನೆಗೂ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೇರವೇರಿಸಿರುವ ಘಟನೆ ನಡೆದಿದೆ. ಇದು ಮಹಾ ಎಕ್ಸ್‌ಪ್ರೆಸ್ ವೆಬ್ ಸೈಟ್ ಬಿಗ್ ಇಂಪ್ಯಾಕ್ಟ್.

ಮಹಾ ಇಂಪ್ಯಾಕ್ಟ್: ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ‘ಧರ್ಮಸ್ಥಳ ಖಾಸಗಿ ಲಾಡ್ಜ್ ನಲ್ಲಿ ವೃದ್ಧ ಆತ್ಮಹತ್ಯೆ’ -‘ಐದು ಮಕ್ಕಳಿದ್ದರೂ ಅನಾಥವಾದ ತಂದೆಯ ಮೃತದೇಹ’ ಎಂದು ಜ.19 ರ ಶುಕ್ರವಾರದಂದು ಮೊದಲು ವರದಿ ಮಾಡಿತ್ತು. ಈ ವರದಿಯ ಲಿಂಕ್ ಎಲ್ಲ ಕಡೆ ವೈರಲ್ ಅಗಿತ್ತು. ಧರ್ಮಸ್ಥಳ  ಪೊಲೀಸರು ಕೂಡ ಬೆಂಗಳೂರಿನ ಪೊಲೀಸರು ಹಾಗೂ ಇತರ ಗ್ರೂಪ್ ಗಳಿಗೆ ಹಂಚಿಕೊಂಡಿದ್ದರು.ಇದು ವೃದ್ಧನ ಕುಟುಂಬಕ್ಕೆ ತಲುಪಿದ ವರದಿಯ ಲಿಂಕ್ ನೋಡಿ ಜ.20 ಶನಿವಾರ ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಕುಟುಂಬ ಸದಸ್ಯರೆಲ್ಲರೂ ಕಣ್ಣೀರು ಹಾಕಿಕೊಂಡು ಆಗಮಿಸಿದ್ದು, ತಮ್ಮ ತಪ್ಪನ್ನು ಒಪ್ಪಿಕೊಂಡು ಪೊಲೀಸರ ಜೊತೆ ಮಾತುಕತೆ ನಡೆಸಿ ಮೃತದೇಹ ಪಡೆಯುವ ಪ್ರಕ್ರಿಯೆ ಮುಗಿಸಿ ಜ.21 ರಂದು ಭಾನುವಾರ ವೃದ್ಧನ ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಗಾರದಿಂದ ಆಂಬುಲೆನ್ಸ್ ಮೂಲಕ ಬೆಂಗಳೂರು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಘಟನೆಯ ವಿವರ: ಹೆಚ್.ವಿ.ಚಂದ್ರಶೇಖರ್ ಎಂಬವರು ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಗಲಾಟೆ ನಡೆದಿದೆ.‌ ಈ ಗಲಾಟೆಯಿಂದ ನೊಂದು ಮನೆಬಿಟ್ಟು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದು ನಂತರ ಜ.17 ರಂದು ಖಾಸಗಿ ಲಾಡ್ಜ್ ಪಡೆದು . ರೂಂ ನಲ್ಲಿ ವಿಷಸೇವಿಸಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ರೂಂ ಬಾಯ್ ನೋಡಿ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಜ.18 ರಂದು ಮಧ್ಯಾಹ್ನ ಮೃತಪಟ್ಟಿದ್ದರು.

ಮನೆಯವರಿಗೆ ಮಾಹಿತಿ: ಧರ್ಮಸ್ಥಳ ಪೊಲೀಸರು ಮೃತಪಟ್ಟ ವೃದ್ಧನ ಬ್ಯಾಗ್ ನಲ್ಲಿದ್ದ ಚೀಟಿ ಹಾಗೂ ಆಧಾರ್ ಕಾರ್ಡ್ ಮೂಲಕ ಮನೆಯವರನ್ನು ಸಂಪರ್ಕಿಸಿ ಸಾವನ್ನಪ್ಪಿದ ವಿಚಾರವನ್ನು ತಿಳಿಸಿದಾಗ ನಮಗೆ ನಮ್ಮ ತಂದೆ ಬೇಡ , ಅವರ ಶವ ನಾವು ತರಲು ಬರುವುದಿಲ್ಲ ಎಂದು ಹೇಳುತ್ತಿದ್ದರು. ಇದೀಗ ತಮ್ಮ ತಪ್ಪಿನ ಅರಿವಿನಿಂದ ಎಚ್ಚೆತ್ತುಕೊಂಡು ತಂದೆಯ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಮೃತಪಟ್ಟ ವೃದ್ಧನ ಕುಟುಂಬದ ವಿವರ: ಬೆಂಗಳೂರು ಉತ್ತರದ 06,13 ನೇ ‘ಎ’ ಕ್ರಾಸ್ ,ಹೊಯ್ಸಳ ನಗರ ,ಸುಂಕದಕಟ್ಟೆ ನಿವಾಸಿ ದಿ.ವೆಂಕಪ್ಪ ಯಾನೆ ಅಪ್ಪಣ್ಣ ಎಂವವರ ಮಗನಾದ ಹೆಚ್.ವಿ.ಚಂದ್ರಶೇಖರ್ (89) ಎಂಬವರಿಗೆ ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರ ಹೆಸರು ಶಶಿಕಲಾ , ರಂಗನಾಥ್ (ಕ್ಯಾಟರಿಂಗ್ ಕೆಲಸ) , ವೆಂಕಟೇಶ್, ರಾಮು( ಹೂವಿನ ವ್ಯಾಪಾರ) ,ಸವಿತಾ ಸೇರಿ ಐದು ಮಕ್ಕಳು ಇದ್ದಾರೆ.

ಧರ್ಮಸ್ಥಳ ಪೊಲೀಸರ ಸ್ಪಂದನೆ: ಧರ್ಮಸ್ಥಳ ಪೊಲೀಸರು ಹಲವು ಘಟನೆಗಳಲ್ಲಿ ನೊಂದವರಿಗೆ ಸಕಾಲಕ್ಕೆ ಸ್ಪಂದನೆ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ಹಾಸನದ ಯುವಕನೊಬ್ಬ ಧರ್ಮಸ್ಥಳದ ಕಾಡಿನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ತಮ್ಮ ಇಲಾಖೆಯ ಜೀಪಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ನಂತರ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಇಂಜಿನಿಯರಿಂಗ್ ಕಳಿತ ಯುವಕ ಸರಿಯಾದ ಕೆಲಸ ಸಿಕ್ಕದೆ ಧರ್ಮಸ್ಥಳದ ರಸ್ತೆ ಪಕ್ಕ ಚೂರಿಯಿಂದ ಇರಿದು ಆತ್ಮಹತ್ಯೆ ಗೆ ಯತ್ನಿಸಿದಾಗ ತಕ್ಷಣ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಸಕಾಲಕ್ಕೆ ಆಂಬುಲೆನ್ಸ್ ಸಿಗದಿದ್ದಾಗ ಇಲಾಖೆಯ ಜೀಪಿನಲ್ಲಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಆತನ ಜೀವ ಕೂಡ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -
spot_img

Latest News

error: Content is protected !!