Wednesday, April 24, 2024
Homeಕರಾವಳಿಧರ್ಮಸ್ಥಳ: ₹15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚತುಷ್ಪಥ ರಸ್ತೆ ನಾಳೆ ಲೋಕಾರ್ಪಣೆ

ಧರ್ಮಸ್ಥಳ: ₹15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚತುಷ್ಪಥ ರಸ್ತೆ ನಾಳೆ ಲೋಕಾರ್ಪಣೆ

spot_img
- Advertisement -
- Advertisement -

ಬೆಳ್ತಂಗಡಿ: ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ ಬಳಿಯಿಂದ‌ ಕಲ್ಲೇರಿವರೆಗೆ ನಿರ್ಮಿಸಲಾದ ಚತುಷ್ಪಥ ರಸ್ತೆಯನ್ನು ನಾಳೆ ( ಫೆ.7) ಬೆಳಿಗ್ಗೆ ರಾಜ್ಯದ ‌ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಂದು‌ ಲೋಕಾರ್ಪಣೆಗೊಳಿಸಲಿದ್ದಾರೆ.

2019ರ ಧರ್ಮಸ್ಥಳ ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಅಂದು ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಹಚ್.ಡಿ. ರೇವಣ್ಣರ ಅವಧಿಯಲ್ಲಿ ಚತುಷ್ಪಥ ರಸ್ತೆಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇಂದು ಈ ರಸ್ತೆ ಲೋಕಾರ್ಪಣೆಗೆ ಸಿದ್ದವಾಗಿದ್ದು, ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ನಾಳೆ ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಅಂಗಾರ, ಶಾಸಕ ಹರೀಶ್ ಪೂಂಜ ಸೇರಿದಂತೆ ನಾಡಿನ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಇದು ಸುಮಾರು 2 ಕಿ.ಮೀ. ದೂರದ ಚತುಷ್ಪಥ ರಸ್ತೆಯಾಗಿದ್ದು, 7.50ಯಂತೆ ಎರಡು ಬದಿ ಒಟ್ಟು 15 ಮೀಟರ್ ನಷ್ಟು ರಸ್ತೆ ಅಗಲವಾಗಿದೆ. ಎರಡು ರಸ್ತೆಗಳ ಮಧ್ಯೆ 2.50 ಮೀ. ಗಾರ್ಡನಿಂಗ್​ಗಾಗಿ ಡಿವೈಡರ್ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿ, ಭಕ್ತರು ನಡೆದುಕೊಂಡು ‌ಹೋಗಲು ಸಹಾಯವಾಗುವಂತೆ ಫುಟ್​ಪಾಥ್​ ನಿರ್ಮಿಸಲಾಗಿದೆ.

- Advertisement -
spot_img

Latest News

error: Content is protected !!