Friday, May 17, 2024
Homeಕರಾವಳಿಧರ್ಮಸ್ಥಳ: 'ಬದುಕು ಕಟ್ಟೋಣ ಬನ್ನಿ' ತಂಡದಿಂದ 2ನೇ ವರ್ಷದ ನೇತ್ರಾವತಿ ನದಿ ಸ್ವಚ್ಚತಾ ಕಾರ್ಯಕ್ರಮ

ಧರ್ಮಸ್ಥಳ: ‘ಬದುಕು ಕಟ್ಟೋಣ ಬನ್ನಿ’ ತಂಡದಿಂದ 2ನೇ ವರ್ಷದ ನೇತ್ರಾವತಿ ನದಿ ಸ್ವಚ್ಚತಾ ಕಾರ್ಯಕ್ರಮ

spot_img
- Advertisement -
- Advertisement -

ಬೆಳ್ತಂಗಡಿ: “ಬದುಕು ಕಟ್ಟೋಣ ಬನ್ನಿ ” ತಂಡ ಮತ್ತು ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ 2ನೇ ವರ್ಷದ ಧರ್ಮಸ್ಥಳದ ನೇತ್ರಾವತಿ ನದಿ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮವನ್ನು ಹಿರಿಯ ಅರೆಸ್ಸೆಸ್ ಮುಖಂಡ ಮೋಹನ್ ರಾವ್ ಕಲ್ಮಂಜ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ್ ರಾವ್ ,ಉಜಿರೆ ಜನರ್ಧಾನ ದೇವಾಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ವಿಪತ್ತು ಘಟಕದ ಯೋಜನಾಧಿಕಾರಿ ಜೈವಂತ್ ಪಟಕಾರ್,ಭಜರಂಗದಳದ ಜಿಲ್ಲಾ ಸಂಚಾಲಕರಾದ ಭಾಸ್ಕರ್ ಧರ್ಮಸ್ಥಳ, ಬದುಕು ಕಟ್ಟೋಣ ಬನ್ನಿ ತಂಡದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಸಂಧ್ಯಾ ಟ್ರೇಟರ್ಸ್ ಮಾಲಕ ರಾಜೇಶ್ ಪೈ ಉಪಸ್ಥಿತರಿದ್ದರು.

ಸ್ವಚತಾ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಡೆ , ಹರ್ಷೇಂದ್ರ ಕುಮಾರ್ , ಯಶೋವರ್ಮ ಬಂದು ವೀಕ್ಷಣೆ ಮಾಡಿ ಶುಭ ಆರೈಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸ್ವಚತಾ ಕೆಲಸಕ್ಕೆ ಪರಿಕರಗಳನ್ನು ಚಲನಚಿತ್ರ ನಟ ಅರವಿಂದ ಬೋಳಾರ್ ವಿತರಿಸಿದರು. ಸ್ವಚತಾ ಕಾರ್ಯಕ್ರಮದಲ್ಲಿ ಅರವಿಂದ ಬೋಳಾರ್ ಕೂಡ ನೀರಿಗಿಳಿದು ಸ್ವಚತೆಯನ್ನು ಮಾಡಿದರು.

ಬದುಕು ಕಟ್ಟೋಣ ಬನ್ನಿ ತಂಡದ ಜೊತೆ ರೋಟರಿ ಕ್ಲಬ್ ಬೆಳ್ತಂಗಡಿ, ಪ್ರಥಮ ದರ್ಜೆ ಕಾಲೇಜ್ ಮೇಲಂತಬೆಟ್ಟು , ಎಸ್.ಡಿ.ಎಂ ಕಾಲೇಜಿನ ಎನ್ನೆಸ್ಸೆಸ್ ಘಟಕ, SKDRDP ವಿಪತ್ತು ನಿರ್ವಾಹನ ಘಟಕ, ಶ್ರೀರಾಮ ಭಜನಾ ಟ್ರಸ್ಟ್ ಉಜಿರೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿ ವರ್ಗದವರು ಸೇರಿ 350 ಕ್ಕೂ ಅಧಿಕ ಮಂದಿ ಸ್ವಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ತಿಮ್ಮಯ್ಯ ನಾಯ್ಕ್ ನಿರೂಪಿಸಿದರು.

- Advertisement -
spot_img

Latest News

error: Content is protected !!