- Advertisement -
- Advertisement -
ಬೆಳ್ತಂಗಡಿ : ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ನದಿಯಿಂದ ಮರಳನ್ನು ತೆಗೆದು ಈಚರ್ ಟಿಪ್ಪರ್ ಗೆ ತುಂಬಿಸುತ್ತಿದ್ದಾಗ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮರಳು ತುಂಬಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಡ್ಯ ಎಂಬಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಟಿಪ್ಪರ್ ಗೆ ತುಂಬಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ನೇತೃತ್ವದ ತಂಡ ಆ.4 ರಂದು ದಾಳಿ ಮಾಡಿದ್ದಾರೆ. ದಾಳಿ ವೇಳೆ ಮರಳು ತುಂಬಿದ ಈಚರ್ ಟಿಪ್ಪರ್ ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.
- Advertisement -