ಬೆಳ್ತಂಗಡಿ:ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ಭಕ್ತಿಗೀತೆ ಸ್ವರ್ಧೆ ಏರ್ಪಡಿಸಲಾಗಿದ್ದು,ಹದಿನೇಳು ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.
ಗಣೇಶನ ಭಕ್ತಿಗೀತೆ ಅಥವಾ ಭಜನಾ ಸ್ಪರ್ಧೆಯಲ್ಲಿ ಸಮಯದ ಮಿತಿ ಗರಿಷ್ಠ 3 ನಿಮಿಷವಿರಬೇಕು..ಅಲ್ಲದೆ ಯಾವುದೇ ರೀತಿಯ ಎಡಿಟಿಂಗ್ ಮಾಡಿದ ವಿಡಿಯೋವನ್ನು ಪರಿಗಣಿಸುವುದಿಲ್ಲ ಎಂಬ ನಿಯಮವನ್ನು ಮಾಡಲಾಗಿದೆ.
ಸ್ವಸ್ವರ್ಧಾಳುಗಳು ಸಂಗೀತ ಉಪಕರಣಗಳನ್ನು ಹೋರತುಪಡಸಿ ಬೇರೆ ಯಾವುದೇ ಕರೋಕೆ ಬಳಸುವಂತಿಲ್ಲ ಜೊತೆಗೆ ಭಜನೆಯನ್ನು ಚಿತ್ರೀಕರಣ ಮಾಡುವಾಗ ಲ್ಯಾಂಡ್ ಸ್ಕೇಪ್ ವಿಡಿಯೋ ಮಾಡತಕ್ಕದ್ದು ಅಂದರೆ ಮೊಬೈಲ್ ಅನ್ನು ಅಡ್ಡಹಿಡಿದು ವಿಡಿಯೋ ಮಾಡಬೇಕು.ಚಿತ್ರೀಕರಿಸಿದ ವಿಡಿಯೋವನ್ನು 9483306777 ಈ ನಂಬರಿಗೆ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕು.

ಈ ಎಲ್ಲಾ ವಿಡಿಯೋಗಳನ್ನು ಯುವ ಕಾಂಗ್ರೆಸ್ ಬೆಳ್ತಂಗಡಿ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು,
ಸ್ವರ್ಧೆಗೆ ಕೇವಲ ಬೆಳ್ತಂಗಡಿ ತಾಲೂಕಿನವರಿಗೆ ಮಾತ್ರ ಅವಕಾಶವಿದೆ.ಸ್ವರ್ಧಾಳುಗಳು ಸೆಪ್ಟೆಂಬರ್ 7 ರ ಒಳಗಾಗಿ ವಿಡಿಯೋವನ್ನು ತಮ್ಮ ತಮ್ಮ ಹೆಸರು, ಫೋಟೋ ಹಾಗೂ ವಿಳಾಸದೊಂದಿಗೆ ಕಳುಹಿಸತಕ್ಕದ್ದು. ಸೆಪ್ಟೆಂಬರ್ 10 ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿದೆ.
ಸ್ಪರ್ಧೆಯ ಪ್ರಥಮ ಬಹುಮಾನವಾಗಿ 5,555 ರೂ. ಹಾಗೂ ದ್ವಿತೀಯ ಬಹುಮಾನವಾಗಿ 3,333 ರೂ. ಹಾಗೂ 5 ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.ಅತೀ ಹೆಚ್ಚು ಲೈಕ್ ಪಡೆದ 1 ಸ್ವರ್ಧಿಗೆ ವಿಶೇಷ ಬಹುಮಾನವನ್ನುಘೋಷಿಸುವದರ ಜೊತೆಗೆ ಸೆಪ್ಟೆಂಬರ್ 8 ರಂದು ತಮ್ಮ ವಿಡಿಯೋಗೆ ಲೈಕ್ ಪಡೆಯಲು ಕೊನೆಯ ದಿನಾಂಕವಾಗಿದೆ.


