Wednesday, May 15, 2024
Homeತಾಜಾ ಸುದ್ದಿತಮ್ಮ ಪಠ್ಯ ಕೈಬಿಡುವಂತೆ ಕೋರಿದ್ದ ಹಿನ್ನೆಲೆ: ದೇವನೂರ ಮಹಾದೇವ ಸೇರಿ ಏಳು ಲೇಖಕರ ಪಠ್ಯ ಕೈಬಿಟ್ಟ...

ತಮ್ಮ ಪಠ್ಯ ಕೈಬಿಡುವಂತೆ ಕೋರಿದ್ದ ಹಿನ್ನೆಲೆ: ದೇವನೂರ ಮಹಾದೇವ ಸೇರಿ ಏಳು ಲೇಖಕರ ಪಠ್ಯ ಕೈಬಿಟ್ಟ ಸರ್ಕಾರ

spot_img
- Advertisement -
- Advertisement -

ಬೆಂಗಳೂರು: ಪಠ್ಯ ಪರಿಶೀಲನೆಗೆ ರಚಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಾಹಿತಿಗಳು ತಮ್ಮ ಪಠ್ಯವನ್ನು ಕೈಬಿಡುವಂತೆ ಕೋರಿದ್ದರು. ಈ ಸಂಬಂಧ ಪತ್ರ ಸಹ ಬರೆದಿದ್ದರು, ಗದ್ಯ ಮತ್ತು ಪದ್ಯಗಳನ್ನು ಪಠ್ಯದಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ಈ ಲೇಖಕರ ಅನುಮತಿ ಕೋರಿತ್ತು. ಮನವಿಯನ್ನು ಲೇಖಕರು ತಿರಸ್ಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಲೇಖಕ ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ ಏಳು ಲೇಖಕರ ಪಠ್ಯವನ್ನು ಕೈಬಿಟ್ಟಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಈ ಲೇಖಕರು ಅನುಮತಿ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪಠ್ಯದಲ್ಲಿದ್ದ ಈ ಸಾಹಿತಿಗಳ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿದೆ..

- Advertisement -
spot_img

Latest News

error: Content is protected !!