- Advertisement -
- Advertisement -
ಮಂಗಳೂರು: ನಗರದ ಹೊರ ವಲಯದ ಸೋಮೇಶ್ವರದಲ್ಲಿ ಆರೋಪಿಯೊಬ್ಬನಿಂದ 50 ಸಾವಿರ ಮೌಲ್ಯದ ಗಾಂಜಾ ಪತ್ತೆಯಾಗಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳೀಯ ಪ್ರದೇಶದಲ್ಲಿ ತಿರುಗಾಡುತ್ತಿರುವಾಗ ಲಭಿಸಿದ ಮಾಹಿತಿಯ ಮೇರೆಗೆ ಆರೋಪಿಯಿಂದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಹರ್ಷವರ್ಧನ್ ಎಂದು ಗುರುತಿಸಲಾಗಿದೆ.
ಈತ ಚಿಲ್ಲರೆಯಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಮಾರಾಟ ಮಾಡಲು ಗಾಂಜಾ ತಂದಿದ್ದ ಎಂಬುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಅಬಕಾರಿ ಉಪ ನಿರೀಕ್ಷಕ ಸುಧೀರ್, ಅಬಕಾರಿ ಕಾನ್‌ಸ್ಟೇಬಲ್ ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
- Advertisement -