ಬೆಳ್ತಂಗಡಿ : ದಂತ ವೈದ್ಯಕೀಯ ಸೇವೆಗಳಲ್ಲಿ ಉನ್ನತ ತಾಂತ್ರಿಕ ವ್ಯವಸ್ಥೆಯನ್ನೂ ಒಳಗೊಂಡ ಸರ್ವ ಸಜ್ಜಿತ ಕ್ಲಿನಿಕ್ “ಡೆಂಟ್ಲಾಗ್ ಸ್ಟುಡಿಯೋ” ಇದರ ಉದ್ಘಾಟನೆಯು ಗುರುವಾಯನಕೆರೆಯ ವಿಕಾಸ ಬ್ಯಾಂಕಿನ ಮಳಿಗೆಯ ಪ್ರಥಮ ಮಹಡಿಯಲ್ಲಿ ಮಾ.27 ರಂದು ಶುಕ್ರವಾರ ಉದ್ಘಾಟನೆಗೊಂಡಿತು.
ಸುನ್ನತ್‌ಕೆರೆ ಮಸ್ಜಿದ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್, ಖ್ಯಾತ ವೈದ್ಯ ಡಾ. ವೇಣುಗೋಪಾಲ್ ಶರ್ಮ ಮತ್ತು ವಿಕಾಸ ಬ್ಯಾಂಕಿನ ಆಡಳಿತ ಮಂಡಳಿ ಚೇರ್ಮೆನ್ ಅಲೋಶಿಯಸ್ ಡಿಸೋಜಾ ಇವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕ್ಲಿನಿಕ್ ಉದ್ಘಾಟನೆಗೊಳಿಸಿದರು.
ಮಳಿಗೆಯ ಒಳಗೆ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಚಿಕಿತ್ಸಾ ಎರಡು ಆಸನಗಳನ್ನು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಕ್ಲಿಫರ್ಡ್ ಸೈಮನ್ ಪಿಂಟೋ ಹಾಗೂ ಗ್ರಾ.ಪಂ ನಿಕಟಪೂರ್ವ ಸದಸ್ಯ ಮುಸ್ತಪಾ ಗುರುವಾಯನಕೆರೆ ಪರದೆ ಸರಿಸುವ ಮೂಲಕ ಅನಾವರಣ ಗೊಳಿಸಿದರು.
ವಿಕಲಚೇತನರು ಹಾಗೂ ವಿಶೇಷ ಆವಶ್ಯತೆಯುಳ್ಳವರಿಗೆ ಮನೆ ಬಾಗಿಲಿಗೇ ತೆರಳಿ ಹಲ್ಲಿನ ಚಿಕಿತ್ಸೆ ಸೌಲಭ್ಯ ನೀಡಬಹುದಾದ ‘ಮೊಬೈಲ್ ಡೆಂಟಲ್ ಕೇರ್ ಯುನಿಟ್’ ಅನ್ನು ವಿಕಾಸ ಬ್ಯಾಂಕಿನ ಸಿಇಒ ಅನಿತಾ ಫೆರ್ನಾಂಡಿಸ್ ಉದ್ಘಾಟಿಸಿದರು.ಬಳಿಕ ನಡೆದ ಸಮಾರಂಭದಲ್ಲಿ ಸಮಾಜ ಸೇವಕ ಹಾಗೂ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಅವರನ್ನು ಅವರ ವೈದ್ಯಕೀಯ ಸೇವಾ ಸಹಕಾರಕ್ಕಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗುರುವಾಯನಕೆರೆ ಮಸ್ಜಿದ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಬಿಬಿಎಸ್ ವಾಣಿಜ್ಯ ಮಳಿಗೆಯ ಮಾಲಿಕ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಎಸ್.ಎಂ.ಎಸ್ ಶಾಮಿಯಾನ ಸಂಸ್ಥೆಯ ಮಾಲಿಕ ಹಾಜಿ ಅಬ್ದುಲ್ ಲೆತೀಫ್,
ಮಡಂತ್ಯಾರಿನ ಸ್ಮೈಲ್ ಡೆಂಟಲ್ ಕೇರ್ ಇದರ ವೈದ್ಯಾಧಿಕಾರಿ ಡಾ. ಶಮೀಮಾ ಅಳಕೆ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಇಸಾಕ್ ಅಳದಂಗಡಿ, ಎಸ್‌ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯದ ಅಧ್ಯಕ್ಷ ಡಿ.ಡಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಪಾಂಡವರಕಲ್ಲಿನ ಉದ್ಯಮಿ ಇಸುಬು ಮೆಹರಾಜ್, ಪಿಲಿಚಂಡಿಕಲ್ಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಖಲಂದರ್ ಬಿ.ಹೆಚ್,ಇವರುಗಳು ಮುಖ್ಯ ಅತಿಥಿಯಾಗಿದ್ದು ಶುಭ ಕೋರಿದರು.

ದಂತ ವೈದ್ಯಾಧಿಕಾರಿ ಡಾ. ಹಾಶಿರ್ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಡಾ. ಹಾಶಿರ್ ಅವರ ತಂದೆ ವಿದೇಶದ ಮಸ್ಕತ್ ನಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಮುಹಿಯುದ್ದೀನ್ ಎಸ್.ಕೆ ಧನ್ಯವಾದವಿತ್ತರು.


