Sunday, May 5, 2024
Homeತಾಜಾ ಸುದ್ದಿ2023-24 ನೇ ಸಾಲಿನ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ : ಯಾವಾಗಿಂದ ತರಗತಿಗಳು ಆರಂಭ?

2023-24 ನೇ ಸಾಲಿನ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ : ಯಾವಾಗಿಂದ ತರಗತಿಗಳು ಆರಂಭ?

spot_img
- Advertisement -
- Advertisement -

ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯು 2023-24 ನೇ ಸಾಲಿನಿಂದ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ ಕೋರ್ಸುಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ.

ಪ್ರಸ್ತುತ ಸಾಲಿನಲ್ಲಿ ಮೇ.22 ರಿಂದ ಜುಲೈ 15 ರೊಳಗೆ ಪದವಿ ಕಾಲೇಜುಗಳ ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜು.17 ರಿಂದ ತರಗತಿಗಳನ್ನು ಆರಂಭಿಸಿ, ನವೆಂಬರ್ 18 ಕ್ಕೆ ಮುಕ್ತಾಯಗೊಳಿಸಬೇಕು. ನವೆಂಬರ್ 20 ರಿಂದ ಪರೀಕ್ಷೆಗಳನ್ನು ಆರಂಭಿಸಿದ 2024 ರ ಜ. 15ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಜ. 16 ರಿಂದ 2 ನೇ ಸೆಮಿಸ್ಟರ್ ತರಗತಿಗಳನ್ನು ಆರಂಭಿಸಿ ಮೇ. 15 ಕ್ಕೆ ಮುಕ್ತಾಯಗೊಳಿಸಬೇಕು. ಮೇ. 13 ರಿಂದ 2 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿ ಜೂನ್ 29 ರೊಳಗೆ ಫಲಿತಾಂಶ ನೀಡಬೇಕು ಎಂದು ರಾಜ್ಯದ ಎಲ್ಲ ವಿವಿಗಳು, ಪದವಿ ಕಾಲೇಜುಗಳಿಗೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.

- Advertisement -
spot_img

Latest News

error: Content is protected !!