Thursday, June 4, 2026
Homeಕರಾವಳಿಕಾಡಾನೆ ದಾಳಿಯಿಂದ ಕೃಷಿಗೆ ಹಾನಿ

ಕಾಡಾನೆ ದಾಳಿಯಿಂದ ಕೃಷಿಗೆ ಹಾನಿ

- Advertisement -
- Advertisement -

ಅರಂತೋಡು: ತೋಟವೊಂದಕ್ಕೆ ಕಾಡಾನೆಗಳು ದಾಳಿ ನಡೆಸಿ, ಬೆಳೆಗಳನ್ನು ನಾಶಪಡಿಸಿದ ಘಟನೆ ತೊಡಿಕಾನ ಸಮೀಪದ ಬಂಗಾರ ಕೋಡಿಯಲ್ಲಿ ಗುರುವಾರದಂದು ರಾತ್ರಿ ವರದಿಯಾಗಿದೆ.

ಕಾಡಾನೆಗಳು ವಿದ್ಯಾ ಅವರ ತೋಟಕ್ಕೆ ದಾಳಿ ನಡೆಸಿದ 10 ಅಡಿಕೆ ಮರ, ಎರಡು ಬಾಳೆ, ಒಂದು ದೀವಿಹಲಸು ಮರವನ್ನು ಮುರಿದು ಹಾಕಿವೆ. ಅಲ್ಲದೆ ಒಂದು ತೆಂಗಿನ ಮರಕ್ಕೆ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.

ಪರಿಸರದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಹಾಗೂ ಜನರು ಆತಂಕದಿಂದಲೇ ದಿನದೂಡುವಂತಾಗಿದೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!