Friday, April 26, 2024
Homeಕರಾವಳಿಹೊಸ ವರ್ಷಕ್ಕೆ ಹಣ್ಣು, ಕಾಯಿ, ಹೂಗಳ ಅಲಂಕಾರದಲ್ಲಿ ಮಿಂದೆದ್ದ ಶ್ರೀ ಕ್ಷೇತ್ರ ಧರ್ಮಸ್ಥಳ

ಹೊಸ ವರ್ಷಕ್ಕೆ ಹಣ್ಣು, ಕಾಯಿ, ಹೂಗಳ ಅಲಂಕಾರದಲ್ಲಿ ಮಿಂದೆದ್ದ ಶ್ರೀ ಕ್ಷೇತ್ರ ಧರ್ಮಸ್ಥಳ

spot_img
- Advertisement -
- Advertisement -

ಧರ್ಮಸ್ಥಳ: ಹೊಸ ವರ್ಷಾಚರಣೆ ಹಿನ್ನಲೆ ಶ್ರೀ ಕ್ಷೇತ್ರ ಧರ್ಮಸ್ಥಳ  ಹೊಸ ವರ್ಷಕ್ಕೆ ಹಣ್ಣು, ಕಾಯಿ, ಹೂಗಳ ಅಲಂಕಾರದಲ್ಲಿ ಮಿಂದೆದ್ದಿದೆ.  ಬೆಂಗಳೂರು ಮೂಲದ ಭಕ್ತರ ತಂಡದಿಂದ ಧರ್ಮಸ್ಥಳ ಕ್ಷೇತ್ರವನ್ನು ಸಂಪೂರ್ಣವಾಗಿ ಹೂ, ಹಣ್ಣು, ಕಾಯಿಗಳಿಂದ ಅಲಂಕರಿಸಿದೆ.

ಪ್ರಸಕ್ತ ವರ್ಷದ ಅಲಂಕಾರಕ್ಕಾಗಿ ಸುಮಾರು 15 ಲೋಡ್‌ನ‌ಷ್ಟು ಅಲಂಕೃತ ಸಾಮಗ್ರಿಗಳನ್ನು ಬಳಸಲಾಗಿದ್ದು, ಇದರಲ್ಲಿ ಹಣ್ಣು ಹಂಪಲು, ವಿವಿಧ ಬಗೆಯ ಅಲಂಕೃತ ಪುಷ್ಪಗಳು, ತರಕಾರಿ ಸೇರಿ 5 ಲೋಡ್‌ ವಸ್ತುಗಳನ್ನು ಬಳಸಿಕೊಂಡು ದೇಗುಲದ ಮುಂಭಾಗ, ಒಳಾಂಗಣ, ದೇವರ ಗರ್ಭಗುಡಿ, ಕಂಬಗಳು, ಹೆಗ್ಗಡೆಯವರ ನಿವಾಸ, ಅನ್ನಪೂರ್ಣ ಛತ್ರ ಸಹಿತ ಪ್ರಮುಖ ಸ್ಥಳವನ್ನು ಸಿಂಗರಿಸಲಾಗಿದೆ.

ಕಲ್ಲಂಗಡಿ ಹಣ್ಣು, ಕಬ್ಬು, ಕಿತ್ತಾಳೆ, ತೆಂಗಿನಕಾಯಿ, ಸೇಬು ಸಹಿತ ವಿವಿಧ ಬಗೆಯ ಹಣ್ಣುಗಳನ್ನು ಬಳಸಿಕೊಂಡು ಸುಮಾರು 90 ಮಂದಿ 5 ದಿನಗಳಲ್ಲಿ ನಿರಂತರವಾಗಿ ಅಲಂಕಾರ ನಡೆಸಿದ್ದಾರೆ.

- Advertisement -
spot_img

Latest News

error: Content is protected !!