Saturday, June 6, 2026
Homeತಾಜಾ ಸುದ್ದಿಮತ್ತೆ ಚಿನ್ನದ ದರದಲ್ಲಿ ಇಳಿಕೆ, ಖುಷಿಯಾದ ಆಭರಣ ಪ್ರಿಯರು!..

ಮತ್ತೆ ಚಿನ್ನದ ದರದಲ್ಲಿ ಇಳಿಕೆ, ಖುಷಿಯಾದ ಆಭರಣ ಪ್ರಿಯರು!..

- Advertisement -
- Advertisement -

ಬೆಂಗಳೂರು : ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರುತ್ತಿದ್ದು ಆಭರಣ ಪ್ರಿಯ.ರು ಫುಲ್ ಖುಷ್ ಆಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಗಳು ಇಳಿಕೆ ಕಂಡಿವೆ. ಈ ಮೂಲಕ ಸತತ ಮೂರನೇ ದಿನ ಚಿನ್ನದ ಬೆಲೆ ಇಳಿದಂತಾಗಿದೆ.

ಆರಂಭಿಕ ವಹಿವಾಟಿನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 49,971 ರೂಪಾಯಿಗಳಿಗೆ ಇಳಿದಿದೆ. ನಿನ್ನೆ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 694 ರೂಪಾಯಿ ಇಳಿಕೆ ಕಂಡಿತ್ತು. ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡು 50 ಸಾವಿರ ಆಸುಪಾಸಿಗೆ ಬಂದಿದೆ. ಆದ್ರೆ ದೀಪಾವಳಿಯವರೆಗೂ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲಿಯೇ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

- Advertisement -

Latest News

error: Content is protected !!