- Advertisement -
![]()
- Advertisement -
ಕಾಸರಗೋಡು; ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಸಿಲುಕಿ 6 ವರ್ಷ ಬಾಲಕಿ ಸಾವನ್ನಪ್ಪಿರುವ ಘಟನೆ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ.
ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿ. ಭಾನುವಾರ ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ಘಟನೆ ನಡೆದಿದೆ.
ಗಂಟಲಲ್ಲಿ ರಂಬುಟಾನ್ ಹಣ್ಣಿನ ಬೀಜ ಸಿಲುಕಿದ್ದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಳು. ಕಂಡಂತರ ಹಿದಾಯತುಲ್ ಇಸ್ಲಾಂ ಶಾಲೆ ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುವ ನೂರ್ ಫಾತಿಮಾ ತಾಯಿ ಮತ್ತು ಸಹೋದರಿಯರಾದ ಬೀಮಾ ಫಾತಿಮಾ ಮತ್ತು ಐಸಾ ಫಾತಿಮಾರನ್ನು ಅಗಲಿದ್ದಾಳೆ.
- Advertisement -


