- Advertisement -
- Advertisement -
ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಫೆ. 1 ರಿಂದ ಜೂನ್ 30 ರ ನಡುವೆ ಅವಧಿ ಮುಕ್ತಾಯವಾಗಿರುವ ವಾಹನ ದಾಖಲೆಗಳು ಜೂನ್ 30 ರವರೆಗೆ ಮಾನ್ಯ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಾಹನ ಪರವಾನಿಗೆ, ನೋಂದಣಿ ಹಾಗೂ ಫಿಟ್ನೆಸ್ ಪ್ರಮಾಣಪತ್ರ, ಪರ್ಮಿಟ್ ಸೇರಿ ಎಲ್ಲಾ ವಾಹನ ದಾಖಲೆಗಳಿಗೆ ಇದು ಅನ್ವಯವಾಗಲಿದೆ. ಲಾಕ್ ಡೌನ್ ಅವಧಿಯಲ್ಲಿ ಕಾಗದ ಪತ್ರಗಳನ್ನು ನವೀಕರಣ ಅಸಾಧ್ಯವಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅವಧಿ ಮುಕ್ತಾಯಗೊಂಡ ಕಾಗದ ಪತ್ರಗಳನ ಮಾನ್ಯತೆಯನ್ನು ಮೇ. 31 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಜೂನ್ 30 ರವರೆಗೆ ಮತ್ತೊಮ್ಮೆ ವಿಸ್ತರಿಸಲಾಗಿದೆ.
- Advertisement -