- Advertisement -
![]()
- Advertisement -
ಮಂಗಳೂರು: ಅಪರಿಚಿತ ಮಹಿಳೆಯೊಬ್ಬರ ಮೃತದೇಹ ನಿನ್ನೆ ಮಂಗಳೂರಿನ ಹೊಯಿಗೆ ಬಜಾರ್ ತಟದಲ್ಲಿ ಪತ್ತೆಯಾಗಿತ್ತು. ಮೃತದೇಹ ಕಾರ್ಕಳ ನಿವಾಸಿ ಸರೋಜ (31) ಎಂದು ಗುರುತು ಪತ್ತೆ ಹಚ್ಚಲಾಗಿದ್ದು, ಮಹಿಳ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಿನ್ನ ಬೆಳಗ್ಗೆ ಹೊಯಿಗೆ ಬಜಾರ್ ನಲ್ಲಿ ದಕ್ಕೆಗೆ ಎಂದು ತೆರಳಿದ್ದ ಮೀನುಗಾರರಿಗೆ ಮೃತದೇಹ ಕಂಡುಬಂದಿದ್ದು, ಕೂಡಲೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸರೋಜಾರನ್ನು ಹಲವು ವರ್ಷಗಳ ಮೊದಲು ಕಾರ್ಕಳಕ್ಕೆ ಮದುವೆ ಮಾಡಿಕೊಡಲಾಗಿತ್ತು. ಕಳೆದ 4 ದಿನಗಳ ಮೊದಲು ತನ್ನ 4 ವರ್ಷದ ಮಗುವಿನೊಂದಿಗೆ ತಾಯಿಮನೆಗೆ ಬಂದಿದ್ದರು.
ಶನಿವಾರ ತಾಯಿ ಮನೆಯಲ್ಲಿ ಮಗುವನ್ನು ಇರಿಸಿ ಮನೆ ಬಿಟ್ಟು ಹೊರಗೆ ಬಂದವರು ಮರಳಿ ಮನೆಗೆ ಹಿಂತಿರುಗಿರಲಿಲ್ಲ.
ಅದಾದ ಬಳಿಕ ನಿನ್ನೆ ಸರೋಜರವರ ಮೃತದೇಹ ಹೊಯಿಗೆ ಬಜಾರ್ ತಟದಲ್ಲಿ ಪತ್ತೆಯಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.
- Advertisement -


