- Advertisement -
![]()
- Advertisement -
ಬೆಳ್ಳಾರೆ ಇಲ್ಲಿನ ಪಾಲ್ತಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬೆಳಿಯಾಲ ನಿವಾಸ ಶೇಷಪ್ಪ ಪೂಜಾರಿ(65) ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಗ್ರಾಮದ ಗುಡ್ಡದಲ್ಲಿ ಪತ್ತೆಯಾಗಿದೆ.
ಇನ್ನು ಸ್ಥಳೀಯರು ಯಾರೋ ಅವರನ್ನು ಕೊಲೆ ಮಾಡಿ ಶವವನ್ನು ಇಲ್ಲಿ ಎಸೆದಿದ್ದಾರೋ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಶೇಷಪ್ಪ ಪೂಜಾರಿ ಅವರು ಹಾಸನದ ಸಕಲೇಶಪುರದಲ್ಲಿ ಹೋಟೆಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು.ಆದರೆ ಅವರ ಶವ ಗ್ರಾಮದ ಗುಡ್ಡದಲ್ಲಿ ಪತ್ತೆಯಾಗಿರೋದು ಅನುಮಾನ ಮೂಡಿಸಿದೆ.ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -


