Wednesday, July 3, 2024
Homeತಾಜಾ ಸುದ್ದಿಕ್ಲಬ್ ಹೌಸ್ ನಿಂದ ಲಕ್ಷಾಂತರ ಜನರ ಡೇಟಾ ಲೀಕ್ ಆರೋಪ

ಕ್ಲಬ್ ಹೌಸ್ ನಿಂದ ಲಕ್ಷಾಂತರ ಜನರ ಡೇಟಾ ಲೀಕ್ ಆರೋಪ

spot_img
- Advertisement -
- Advertisement -

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕ್ಲಬ್​ಹೌಸ್ ಆಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ.  . ಯಾರಾದರೂ ಯಾರೊಂದಿಗಾದರೂ ಮುಕ್ತವಾಗಿ ಮಾತನಾಡಲು ಅವಕಾಶವಿರುವ ಈ ಆಯಪ್​ ಸಾಕಷ್ಟು ವಿಚಾರಗಳಲ್ಲಿ ಜನತೆಗೆ ಇಷ್ಟವಾಗಿದೆ. ಆದರೆ ಈ ಆಯಪ್​ನಿಂದಾಗಿ ಲಕ್ಷಾಂತರ ಜನರ ಡೇಟಾ ಲೀಕ್​ ಆಗಿದೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ.

ಸೈಬರ್ ಭದ್ರತಾ ತಜ್ಞ ಜಿತೆನ್ ಜೈನ್ ಎನ್ನುವವರು ಈ ವಿಚಾರವಾಗಿ ತಿಳಿಸಿದ್ದಾರೆ. ಕ್ಲಬ್​ಹೌಸ್ ಬಳಸುವವರು ಮಾತ್ರವಲ್ಲ, ಅವರ ಫೋನ್​ನಲ್ಲಿ ಇರುವ ಕಾಂಟಾಕ್ಟ್​ಗಳ ದತ್ತಾಂಶವೂ ಲೀಕ್ ಆಗಿದೆ. ಅದೆಲ್ಲವೂ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕ್ಲಬ್​ಹೌಸ್​ಗೆ ಕಂಟ್ಯಾಕ್ಟ್ ಲಿಸ್ಟ್ ಅಕ್ಸೆಸ್ ಇರುವುದರಿಂದ ಅದರ ಬಳಕೆದಾರರ ಕಾಂಟಾಕ್ಟ್​ನಲ್ಲಿರುವವರಿಗೂ ಸಮಸ್ಯೆ ತಪ್ಪಿದ್ದಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ ಈ ಆರೋಪವನ್ನು ಕ್ಲಬ್​ಹೌಸ್ ಸಂಪೂರ್ಣವಾಗಿ ತಳ್ಳಿ ಹಾಕಿದೆ. ನಾವು ನಮ್ಮ ಗ್ರಾಹಕರ ಸುರಕ್ಷೆತೆಗಾಗಿ ಹೆಚ್ಚಿನ ಗಮನ ನೀಡುತ್ತೇವೆ. ಗ್ರಾಹಕರ ಹೆಸರನ್ನಾಗಲೀ, ಫೋಟೋವನ್ನಾಗಲೀ ಅಥವಾ ಯಾವುದೇ ರೀತಿಯ ದತ್ತಾಂಶವನ್ನು ನಾವು ಸೋರಿಕೆ ಮಾಡುತ್ತಿಲ್ಲ ಎಂದು ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!