Thursday, June 4, 2026
Homeತಾಜಾ ಸುದ್ದಿಮತ್ತೆ ಗೆಳೆಯ ಚಿರು ಸರ್ಜಾ ಬೆಂಬಲಕ್ಕೆ ನಿಂತ ಡಿ ಬಾಸ್

ಮತ್ತೆ ಗೆಳೆಯ ಚಿರು ಸರ್ಜಾ ಬೆಂಬಲಕ್ಕೆ ನಿಂತ ಡಿ ಬಾಸ್

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಇದೆ ಎಂಬ ವಿಚಾರವಾಗಿ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ನೀಡಿದ್ದಾರೆ.

ನಾನು 20 ವರ್ಷದಿಂದಲೂ ಇಂಡಸ್ಟ್ರಿಯಲ್ಲಿದ್ದೀನಿ. ಇದುವರೆಗೆ ಅಂತಹದ್ದನ್ನು ಕಣ್ಣಾರೆ ನೋಡಿಲ್ಲ. ಇದೆಯೋ ಇಲ್ಲವೋ ಎಂಬುದನ್ನು ಪೊಲೀಸ್ ತನಿಖೆಯಾಗಿ ಗೊತ್ತಾಗಲಿ. ಒಂದು ಕ್ಲಾಸ್ ಎಂದ ಮೇಲೆ ಅಲ್ಲಿ ರ್ಯಾಂಕ್ ಸ್ಟೂಡೆಂಟ್ಸ್ ಇರ್ತಾರೆ, ದಡ್ಡರೂ ಇರ್ತಾರೆ. ಎಲ್ಲರೂ ಒಂದೇ ರೀತಿ ಇರಲ್ಲ ಅಲ್ವಾ? ಏನಿದ್ರೂ ಅದು ಪೊಲೀಸ್ ತನಿಖೆಯಿಂದ ಗೊತ್ತಾಗಲಿ. ಅದಕ್ಕಿಂತ ಮೊದಲು ನಾವೇ ಏನೋ ತೀರ್ಪು ಕೊಡುವುದು ಬೇಡ ಎಂದು ದರ್ಶನ್ ಮಾಧ್ಯಮಗಳಿಗೆ ಹೇಳಿದ್ದಾರೆ.
 
ಇನ್ನು ಡ್ರಗ್ಸ್ ಪ್ರಕರಣದಲ್ಲಿ ಇಂದ್ರಜಿತ್ ಲಂಕೇಶ್ ಚಿರು ಸರ್ಜಾ ಹೆಸರನ್ನು ಪರೋಕ್ಷವಾಗಿ ಬಳಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ದರ್ಶನ್ ‘ಯಾರಾದರೂ ಬದುಕಿದ್ದರೆ ಅವರನ್ನು ಅವರು ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಸತ್ತವನ ಬಗ್ಗೆ ಏನು ಮಾತಾಡೋಣ ಹೇಳಿ? ಸತ್ತವರ ಬಗ್ಗೆ ಒಂದೊಳ್ಳೆ ಮಾತನಾಡಬೇಕಷ್ಟೇ ಹೊರತು, ಇಲ್ಲದ್ದನ್ನು ಹೇಳಬಾರದು. ಇಂದ್ರಜಿತ್ ಲಂಕೇಶ್ ಹೇಳಿಕೆ ಬಗ್ಗೆ ನಾನೇನು ಹೇಳಲ್ಲ’ ಎಂದಿದ್ದಾರೆ.

- Advertisement -

Latest News

error: Content is protected !!