Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ದೈವದ ಪವಾಡ : 28 ವರ್ಷಗಳ ಬಳಿಕ ಮನೆಗೆ ಬಂದ ಮನೆ ಬಿಟ್ಟು ಹೋಗಿದ್ದ...

ಉಡುಪಿಯಲ್ಲಿ ದೈವದ ಪವಾಡ : 28 ವರ್ಷಗಳ ಬಳಿಕ ಮನೆಗೆ ಬಂದ ಮನೆ ಬಿಟ್ಟು ಹೋಗಿದ್ದ ಮಗ

- Advertisement -
- Advertisement -

ಉಡುಪಿಯಲ್ಲಿ ದೈವದ ಪವಾಡವೊಂದು ನಡೆದಿದೆ. ದೈವ ಅಭಯ ನೀಡಿದಂತೆ 28 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮರಳಿ ಮನೆ ಸೇರಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಪಡಕುಡೂರು ಗ್ರಾಮದ ಸುಂದರ ಪೂಜಾರಿ ಎಂಬುವರ ಮೂವರು ಮಕ್ಕಳಲ್ಲಿ ಭೋಜ ಪೂಜಾರಿ ಒಬ್ಬನೇ ಒಬ್ಬ ಮಗನಾಗಿದ್ದರು. ಅವರು ಯಾವುದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದರು.

ಮಗ ಮನೆಗೆ ಬರಲಿ ಎಂದು ಭೋಜ ಪೂಜಾರಿ ಅವರ ತಂದೆ ಪಡುಕುಡೂರಿನ ಭದ್ರಕಾಳಿ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗೆ ಮಗ ಮರಳಿ ಮನೆಗೆ ಬರಲಿ ಅಂತ ಚಾಕರಿಕೆಯನ್ನು ಸುಂದರ ಪೂಜಾರಿ ಸಲ್ಲಿಸುತ್ತಿದ್ದರಂತೆ. ಇದರ ಫಲವಾಗಿ ಈಗ ಬರೋಬ್ಬರಿ 28 ವರ್ಷಗಳ ಬಳಿಕ ಭೋಜ ಪೂಜಾರಿ ಮರಳಿ ಮನೆಗೆ ಬಂದಿದ್ದಾರೆ. ಅವರನ್ನು ಕಂಡು ಕುಟುಂಬಸ್ಥರು, ಗ್ರಾಮಸ್ಥರು ಸಂಭ್ರಮ ಪಟ್ಟಿದ್ದಾರೆ.

ಇನ್ನೂ ಮನೆ ಬಿಟ್ಟು ಹೋಗಿದ್ದಂತ ಭೋಜ ಪೂಜಾರಿಯನ್ನು ಆತನ ಕೈಯಲ್ಲಿದ್ದಂತ ಒಂದು ಗುಳ್ಳೆಯಿಂದ ತಂದೆ ಪತ್ತೆ ಹಚ್ಚಿದ್ದಾರೆ. ಈಗ ಭೋಜ ಪೂಜಾರಿ ಮದುವೆಯಾಗಿದ್ದು, ಪತ್ನಿ, ಮಗಳ ಜೊತೆಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡಿಕೊಂಡು ಇರುವುದಾಗಿ ತಿಳಿಸಿದ್ದಾನೆ. ಊರಿಗೆ ಬಂದು ನೆಲೆ ಕಂಡುಕೊಳ್ಳುವ ಆಸೆಯಿಂದ ಮರಳಿ ಬಂದಿರೋದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!