Thursday, June 4, 2026
Homeಕರಾವಳಿಮಂಗಳೂರುಈ ಬಾರಿ ನಿಮಗೆ ಲೋಕಸಭಾ ಟಿಕೆಟ್ ಸಿಗಲ್ಲ ಎಂದು ಮೊದಲೇ ನಳೀನ್ ಕುಮಾರ್ ಗೆ ಎಚ್ಚರಿಕೆ...

ಈ ಬಾರಿ ನಿಮಗೆ ಲೋಕಸಭಾ ಟಿಕೆಟ್ ಸಿಗಲ್ಲ ಎಂದು ಮೊದಲೇ ನಳೀನ್ ಕುಮಾರ್ ಗೆ ಎಚ್ಚರಿಕೆ ಕೊಟ್ಟಿದ್ದ ದೈವ; ದೈವದ ಎಚ್ಚರಿಕೆಯ ವೀಡಿಯೋ ವೈರಲ್

- Advertisement -
- Advertisement -

ಸುಳ್ಯ; ಈ ಬಾರಿ ನಿಮಗೆ ಲೋಕಸಭಾ ಟಿಕೆಟ್ ಸಿಗಲ್ಲ ಎಂದು ಮೊದಲೇ ನಳೀನ್ ಕುಮಾರ್ ಗೆ ಎಚ್ಚರಿಕೆ ಕೊಟ್ಟಿದ್ದ ದೈವ ಎಚ್ಚರಿಕೆ ನೀಡಿದ ವೀಡಿಯೋ ವೈರಲ್ ಆಗಿದೆ,

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ನಡೆದಿದ್ದ ವಯನಾಟ್ ಕುಲವನ್ ದೈವದ ನೇಮೋತ್ಸವದಲ್ಲಿ ವಿಷ್ಣುಮೂರ್ತಿ ದೈವ ಸಂಸದರಿಗೆ ಎಚ್ಚರಿಕೆ ನೀಡಿತ್ತು. ನಿನಗೆ ವೈರಿಗಳು ತುಂಬಾನೇ ಇದ್ದಾರೆ, ದಾಯಾದಿಗಳೇ ಪರಸ್ಪರ ವೈರಿಗಳಾಗಿ ಕುರುಕ್ಷೇತ್ರ ಯುದ್ಧ ನಡೆಯಲಿಲ್ಲವೇ. ಅಂದು ಪಾರ್ಥನಿಗೂ ಧರ್ಮ ಕಾಪಾಡುವಂತೆ ನಾನು‌ ಸಲಹೆ ನೀಡಿದ್ದೆ. ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ಯಾವುದಕ್ಕೂ ಕುಗ್ಗಬೇಡ ಎಂದಿರುವ ದೈವ, ನೀನು ಹಿಂದುರುಗಿ ನೋಡಬೇಡ, ನಿನಗೆ ಮುಂದೊಂದು ದಿನ ಜಯವಿದೆ ಎಂದು ಅಭಯ ನೀಡಿತ್ತು. ಇದೀಗ ಆ ವೀಡಿಯೋ ವೈರಲ್ ಆಗಿದೆ. ಹಾಗಾಗಿ ಮೊದಲೇ ನಳೀನ್ ಕುಮಾರ್ ಕಟೀಲ್ ಅವರಿಗೆ ಸೂಚನೆ ಸಿಕ್ಕಿತ್ತು ಎನ್ನಲಾಗುತ್ತಿದೆ.

- Advertisement -

Latest News

error: Content is protected !!