Sunday, June 7, 2026
Homeಕರಾವಳಿಸುಳ್ಯ; ಖ್ಯಾತ ಐಸ್ ಕ್ರೀಂ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಆತ್ಮಹತ್ಯೆಗೆ ಶರಣು

ಸುಳ್ಯ; ಖ್ಯಾತ ಐಸ್ ಕ್ರೀಂ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಆತ್ಮಹತ್ಯೆಗೆ ಶರಣು

- Advertisement -
- Advertisement -

 ಸುಳ್ಯ ;ಡೈರಿ ರಿಚ್ ಐಸ್ ಕ್ರೀಂನ ಉದ್ಯಮಿ ಕನಕಮಜಲಿನ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್ ಇವರ ಪತ್ನಿ ಐಶ್ವರ್ಯ(26) ಆತ್ಮಹತ್ಯೆಗೆ ಶರಣಾದವರು.

ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್ ಅವರನ್ನು ವಿವಾಹವಾಗಿದ್ದರು. ಐಶ್ವರ್ಯ ರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಪತಿ ರಾಜೇಶ್ ಸ್ವಂತ ಐಸ್ ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದರು.

ಐಶ್ವರ್ಯ ಳ ತಂದೆ ತಾಯಿ ಕೊಡ ಬೆಂಗಳೂರಿನಲ್ಲೇ ನೆಲೆಸಿದ್ದು, ಕೆಲ ಸಮಯಗಳಿಂದ ಐಶ್ವರ್ಯ ತನ್ನ ತಾಯಿ ಮನೆಗೆ ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!