Thursday, June 4, 2026
Homeಜ್ಯೋತಿಷ್ಯಶುಕ್ರವಾರದ ರಾಶಿ ಭವಿಷ್ಯ: ಇಂದು ಯಾರ ಮೇಲಿದೆ ಲಕ್ಷ್ಮೀಯ ಕೃಪಕಟಾಕ್ಷ?

ಶುಕ್ರವಾರದ ರಾಶಿ ಭವಿಷ್ಯ: ಇಂದು ಯಾರ ಮೇಲಿದೆ ಲಕ್ಷ್ಮೀಯ ಕೃಪಕಟಾಕ್ಷ?

- Advertisement -
- Advertisement -

ಮೇಷ ರಾಶಿ: ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಈ ದಿನ ಪ್ರಯತ್ನಿಸಿದಲ್ಲಿ ವಾಪಸ್ ಬರುವ ಅವಕಾಶ ಇದೆ. ಉದ್ಯೋಗ ಬದಲಾವಣೆಗೆ ಅವಕಾಶ ಎದುರು ನೋಡುತ್ತಿದ್ದಲ್ಲಿ ಮಾರ್ಗದರ್ಶನ ದೊರೆಯಲಿದೆ. ಅದನ್ನು ಬಳಸಿಕೊಂಡಲ್ಲಿ ನಿಮ್ಮ ಉದ್ದೇಶ ಈಡೇರುತ್ತದೆ.

ವೃಷಭ ರಾಶಿ: ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಅತಿಯಾದ ವಿಶ್ವಾಸದಿಂದ ತೆಗೆದುಕೊಳ್ಳುವ ತೀರ್ಮಾನಗಳು ಖರ್ಚಿಗೆ ದಾರಿ ಆಗಬಹುದು. ಕೆಲ ಸಮಸ್ಯೆಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತಿವೆ ಎಂಬ ಭಾವನೆ ನಿಮ್ಮಲ್ಲಿ ಮೂಡಲಿದೆ. ಅನಾರೋಗ್ಯ ಸಮಸ್ಯೆ ಉಂಟಾಗಿ ವೈದ್ಯಕೀಯ ವೆಚ್ಚ ಭರಿಸಬೇಕಾಗುತ್ತದೆ.

ಮಿಥುನ ರಾಶಿ: ವಿದೇಶ ಪ್ರಯಾಣಕ್ಕೆ ತೆರಳಬೇಕು ಎಂದುಕೊಂಡಿರುವವರಿಗೆ ಇತರರ ನೆರವು ದೊರೆಯಲಿದೆ. ಹಣಕಾಸು ಹೊಂದಿಸಿಕೊಳ್ಳುತ್ತಿದ್ದಲ್ಲಿ ಅದಕ್ಕೆ ಕೂಡ ದಾರಿ ಗೋಚರ ಆಗುತ್ತದೆ. ಯಾರು ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರೋ ಅಂಥವರೋ ಅಚ್ಚರಿ ಪಡುವಂತೆ ನಿಮ್ಮ ಕಾರ್ಯ ನಿರ್ವಹಣೆ ಇರುತ್ತದೆ

ಕರ್ಕಾಟಕ ರಾಶಿ: ಯಾವುದೇ ನಿರ್ಧಾರವನ್ನು ಮಾಡುವಾಗ ಸ್ಪಷ್ಟತೆ ಇರಲಿ. ಕ್ಷಣಕ್ಕೊಂದು ತೀರ್ಮಾನ ತೆಗೆದುಕೊಳ್ಳುವುದರಿಂದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಸಂಗಾತಿ ಜತೆಗೆ ಸುಮಧುರವಾದ ಕ್ಷಣಗಳನ್ನು ಕಳೆಯಲಿದ್ದೀರಿ. ಸಂತಾನ ಅಪೇಕ್ಷಿತರಿಗೆ ಸಿಹಿ ಸುದ್ದಿ ಕೇಳುವ ಯೋಗ ಇದೆ. ಸೌಂದರ್ಯ ಪ್ರಜ್ಞೆ ಹೆಚ್ಚಾಗಲಿದೆ.

ಸಿಂಹ ರಾಶಿ: ಔಷಧ- ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ಅಲರ್ಜಿ ಆಗುವ ಸಾಧ್ಯತೆ ಇದೆ. ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುವ ಯೋಗ ಇದೆ. ಈ ಹಿಂದೆ ನೀಡಿದ್ದ ಮಾತನ್ನು ಈಗ ಪೂರೈಸಬೇಕಾಗುತ್ತದೆ. ಅದಕ್ಕೆ ಹೆಚ್ಚಿನ ಹಣ ಖರ್ಚಾಗಲಿದೆ.

ಕನ್ಯಾ ರಾಶಿ: ಪ್ರೇಮಿಗಳಿಗೆ ಉತ್ತಮವಾದ ದಿನವಿದು. ಸಂತೋಷವಾಗಿ ಸಮಯ ಕಳೆಯಬಹುದು. ಆದರೆ ಚಾಡಿ ಮಾತುಗಳಿಗೆ ಸೊಪ್ಪು ಹಾಕಬೇಡಿ. ಹೊಸ ವಸ್ತ್ರಾಭರಣ ಖರೀದಿಗಾಗಿ ಸಾಲ ಮಾಡಬಹುದು ಅಥವಾ ಕ್ರೆಡಿಟ್ ಕಾರ್ಡ್ ಬಳಸಲಿದ್ದೀರಿ. ಆದರೆ ಅದಕ್ಕೆ ಮುನ್ನ ನಿಮ್ಮ ಅಗತ್ಯವನ್ನು ತೀರ್ಮಾನಿಸಿ.

ತುಲಾ ರಾಶಿ: ಹೊಸ ಗ್ಯಾಜೆಟ್ ಖರೀದಿ ಮಾಡುವ ಬಗ್ಗೆ ಆಲೋಚನೆ ಬರಲಿದೆ. ಮಕ್ಕಳ ಭವಿಷ್ಯದ ಕುರಿತು ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಹೊಸದನ್ನು ಆರಂಭಿಸುವ ಸಾಧ್ಯತೆ ಇದೆ. ಸ್ನೇಹಿತರ ಜತೆ ವಾಗ್ವಾದ ನಡೆಯಬಹುದು. ಸಾಧ್ಯವಾದಷ್ಟು ಮಾತಿನ ಮೇಲೆ ಹಿಡಿತ ಇರಲಿ.

ವೃಶ್ಚಿಕ ರಾಶಿ: ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಆದಾಯ ಮೂಲ ಹೆಚ್ಚಳವಾಗುವ ದಾರಿ ಗೋಚರ ಆಗುತ್ತದೆ. ಸ್ವಂತ ಮನೆ ಇರುವವರು ದುರಸ್ತಿ ಮಾಡುವ ಬಗ್ಗೆ ಆಲೋಚನೆ ರೂಪಿಸಲಿದ್ದೀರಿ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ನೀವೇ ನೇತೃತ್ವ ವಹಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.

ಧನಸ್ಸು ರಾಶಿ: ಜೂಜು, ಸಟ್ಟಾ ವ್ಯವಹಾರ ಮಾಡುವುದರಿಂದ ದೂರವಿರಿ. ನಿಮಗೆ ಸಂಬಂಧಪಡದ ವಿಚಾರದಲ್ಲಿ ಮೂಗು ತೂರಿಸಬೇಡಿ. ನಾಲಗೆಯಿಂದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಅದು ಮಾತೇ ಆಗಿರಲಿ ಅಥವಾ ಆಹಾರ ಸೇವನೆ ಇರಲಿ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು.

ಮಕರ ರಾಶಿ: ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾದ ಕಾಗದ- ಪತ್ರಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು. ಸರ್ಕಾರದಿಂದ ಆಗಬೇಕಾದ ಕೆಲಸಗಳಿದ್ದಲ್ಲಿ ಒಂದು ಸಲಕ್ಕೆ ಮುಗಿಯುವುದಿಲ್ಲ. ಆದ್ದರಿಂದ ಯಾವುದೇ ಮುಖ್ಯ ಕೆಲಸ ಇದ್ದಲ್ಲಿ ಅದು ಆಗಬಹುದಾ ಎಂಬುದನ್ನು ಆಲೋಚಿಸಿದ ನಂತರವೇ ಮುಂದಕ್ಕೆ ಹೆಜ್ಜೆ ಇಡಿ.

ಕುಂಭ ರಾಶಿ: ವಾಹನ ಖರೀದಿ ಮಾಡುವ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಸಲಿದ್ದೀರಿ. ರುಚಿಕಟ್ಟಾದ ಊಟ ಸವಿಯುವ ಯೋಗ ಇದೆ. ಸಂಬಂಧಿಕರು ನೆರವು ಕೇಳಿಕೊಂಡು ಬರಬಹುದು. ಡೇರಿ ವ್ಯವಹಾರ ನಡೆಸುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಪರ ಕಾರಣಗಳಿಗಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ.

ಮೀನ ರಾಶಿ: ವೇತನ ಹೆಚ್ಚಳ, ಬಡ್ತಿ ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ದಾನ- ಧರ್ಮಾದಿ ಕಾರ್ಯಗಳಲ್ಲಿ ಭಾಗಿ ಆಗಲಿದ್ದೀರಿ. ರಾಜಕಾರಣಿಗಳಿಗೆ ಬಿಡುವಿಲ್ಲದಂಥ ದಿನವಾಗಿರುತ್ತದೆ. ದಾಕ್ಷಿಣ್ಯದಿಂದಾಗಿ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಅನಿವಾರ್ಯವಾಗಿ ಮಾಡಿಕೊಡಬೇಕಾಗುತ್ತದೆ.


- Advertisement -

Latest News

error: Content is protected !!