ಮೇಷ:
ವ್ಯಾಪಾರದಲ್ಲಿ ಅದೃಷ್ಟಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.
ಶುಭ ಸಂಖ್ಯೆ: 8
ವೃಷಭ:
ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವವು. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ.
ಶುಭ ಸಂಖ್ಯೆ: 2
ಮಿಥುನ:
ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ.
ಶುಭ ಸಂಖ್ಯೆ: 6
ಕರ್ಕ:
ಅಪಮಾನ, ಅಪವಾದದಂತಹ ಸಮಸ್ಸೆಗೆ ಸಿಲುಕದಂತೆ ಜಾಗರೂಕರಾಗಿರಿ. ಈ ಸಮಯದಲ್ಲಿ ಮಾತನಾಡುವ ಬದಲು ಮಾತು ಕೇಳುವುದು ಉತ್ತಮ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸಾಧನೆ ತೋರುವರು.
ಶುಭ ಸಂಖ್ಯೆ: 7
ಸಿಂಹ:
ವ್ಯಕ್ತಿತ್ವಕ್ಕೆ ತಕ್ಕ ಗೌರವಗಳು ದೊರೆಯುವವು. ಚಾಣಾಕ್ಷತನದಿಂದ ಕಷ್ಟ ಪರಿಹರಿಸಿಕೊಳ್ಳುವಿರಿ. ಅಪೇಕ್ಷಿತ ಕಾರ್ಯಗಳು ಕೈಗೂಡುವವು. ಸಂಬಂಧಿಗಳಿಂದ ಸಹಕಾರ ದೊರೆಯುವುದು. ದೂರ ಪ್ರಯಾಣ, ಪರ ಸ್ಥಳವಾಸ ಸಂಭವ.
ಶುಭ ಸಂಖ್ಯೆ: 3
ಕನ್ಯಾ:
ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ.
ಶುಭ ಸಂಖ್ಯೆ: 4
ತುಲಾ:
ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯ ಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು.
ಶುಭ ಸಂಖ್ಯೆ: 5
ವೃಶ್ಚಿಕ:
ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವುದು. ಆರ್ಥಿಕ ಅಭಿವೃದ್ಧಿ ಕಂಡುಬರುವುದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವುದು. ಶತೃಗಳೂ ಸೌಮ್ಯರಾಗುವ ಕಾಲ ಇರುವುದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ. ಶುಭ ಸಂಖ್ಯೆ: 6
ಧನು:
ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವದು. ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಉನ್ನತ ಶಿಕ್ಷಣದ ಕನಸು ಈಡೇರುವುದು.
ಶುಭ ಸಂಖ್ಯೆ: 1
ಮಕರ:
ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ.
ಶುಭ ಸಂಖ್ಯೆ: 3
ಕುಂಭ:
ಹಲವು ರೀತಿಯಿಂದ ಧನಾಗಮನವಿದ್ದು ಐಶ್ವರ್ಯವೃದ್ಧಿ, ಸಂಸಾರ ಸುಖ. ಅಪೇಕ್ಷಿತ ವಸ್ತು, ಪ್ರಾಪ್ತಿ, ಮಿತ್ರಾಗಮನ, ವಿಶೇಷ ಸಂತೋಷ ಪ್ರಸಂಗಗಳು ಒದಗಿ ಬಂದು ಸಂಭ್ರಮವೆನಿಸುತ್ತದೆ.
ಶುಭ ಸಂಖ್ಯೆ: 2
ಮೀನ:
ಅಲ್ಪ ತ್ರಾಸದಾಯಕ. ಗಡಿಬಿಡಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಸಂಭವ. ಮಹತ್ವದ ಕೆಲಸಗಳನ್ನು ಮುಂದೂಡುವದು ಒಳ್ಳೆಯದು. ಮಂಗಲಕಾರ್ಯ, ಹೆಸರು, ಕಡಲೆ ದಾನ ಮಾಡಿರಿ.
ಶುಭ ಸಂಖ್ಯೆ: 9