Wednesday, May 15, 2024
Homeಜ್ಯೋತಿಷ್ಯಶುಭ ಶುಕ್ರವಾರದಂದು ನಿಮ್ಮ ಭವಿಷ್ಯ ಹಾಗೂ ರಾಶಿ ಫಲ| ಜನವರಿ 29, 2021

ಶುಭ ಶುಕ್ರವಾರದಂದು ನಿಮ್ಮ ಭವಿಷ್ಯ ಹಾಗೂ ರಾಶಿ ಫಲ| ಜನವರಿ 29, 2021

spot_img
- Advertisement -
- Advertisement -

ನಿತ್ಯ ಪಂಚಾಂಗ:
ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಪಾಡ್ಯ ತಿಥಿ, ಶುಕ್ರವಾರ, ಜನವರಿ 29, 2021. ಆಶ್ಲೇಷ ನಕ್ಷತ್ರ, ರಾಹುಕಾಲ: ಇಂದು ಬೆಳಗ್ಗೆ 11.03 ರಿಂದ ಬೆಳಗ್ಗೆ 12.28 ನಿಮಿಷ. ಸೂರ್ಯೋದಯ: ಬೆಳಿಗ್ಗೆ 6.48. ಸೂರ್ಯಾಸ್ತ: ಸಂಜೆ 6.09.

ರಾಶಿಭವಿಷ್ಯ
ಮೇಷ:
ಆರ್ಥಿಕ ಸ್ಥಿತಿ ಸುಧಾರಿಸುವದು. ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವದು. ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ಇದೆ. ಪ್ರೀತಿ, ಹಣ ಕಾಸು ಹಾಗೂ ನೆಮ್ಮದಿಗೆ ಏನೂ ತೊಂದರೆ ಆಗುವುದಿಲ್ಲ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಲು ಇದು ಸುಸಮಯ. ನಿಮಗೆ ಅರಿವಿಲ್ಲದಂತೆ ಖ್ಯಾತಿ ಹಾಗೂ ಸೌಂದರ್ಯ ಎರಡೂ ವೃದ್ದಿಸುತ್ತದೆ. ಇದರಿಂದಾಗಿ ಆತ್ಮವಿಶ್ವಾಸ ಸಹ ಹೆಚ್ಚುತ್ತದೆ. ಶಾರೀರಿಕವಾಗಿಯೂ ಸುಖ- ಸಂತೋಷ ಇರುತ್ತದೆ.
ಶುಭ ಸಂಖ್ಯೆ:4

ವೃಷಭ:
ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ- ಕಾರ್ಯಗಳನ್ನು ಸಾಧಿಸುತ್ತೀರಿ. ಈ ಹಿಂದೆ ಮಾಡಲಾಗದೆ ಬಿಟ್ಟಿದ್ದ ಕೆಲಸ- ಕಾರ್ಯಗಳು ಏನಾದರೂ ಇದ್ದಲ್ಲಿ ಅವುಗಳನ್ನು ಮಾಡಿ ಮುಗಿಸಿಕೊಳ್ಳಲು ಇದು ಉತ್ತಮ ಸಮಯ.
ಶುಭ ಸಂಖ್ಯೆ:9

ಮಿಥುನ:
ಹೊಟ್ಟೆಕಿಚ್ಚು ಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ. ಶತ್ರುಗಳು ತಾವಾಗಿಯೇ ದೂರಸರಿಯುವರು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ. ವ್ಯಾವಹಾರಿಕವಾಗಿ ನೋಡಿದಾಗ ಮಾತ್ರ ನಿಮಗೆ ಖರ್ಚು ಹೆಚ್ಚು ಕಾಣಿಸುತ್ತಿದೆ. ಆದರೆ ಸಮಯಕ್ಕೆ ಸರಿಯಾಗಿ ದುಡ್ಡು ಸಿಗುತ್ತದೆ ಎಂಬುದೇ ಆಶ್ಚರ್ಯಕರ. ನಿಮ್ಮ ಆರ್ಥಿಕ ಸ್ಥಿತಿ ವಿಚಿತ್ರವಾಗಿ ಇರುತ್ತದೆ. ಪ್ರಯತ್ನಿಸಿದರೆ ಮಾತ್ರ ಸಂತೋಷಕ್ಕೆ ಏನೂ ಕೊರತೆ ಇರುವುದಿಲ್ಲ. ಮನಸಿನಲ್ಲಿ ಇರುವ ಭಯ ಎಲ್ಲ ಬಿಟ್ಟು ಇರಬೇಕಾದ ದಿನ ಇದು.ಹಣಕಾಸಿನ ವ್ಯವಹಾರಗಳಿಂದ ಆದಷ್ಟೂ ದೂರವಿರಿ.
ಶುಭ ಸಂಖ್ಯೆ:7

ಕರ್ಕ:
ಆರೋಗ್ಯಕ್ಕೆ ಸಂಬಂಧಿಸಿದ ವಿಪತ್ತಿನಿಂದ ಪಾರಾಗುವಿರಿ. ಕಷ್ಟದ ಸಮಯದಲ್ಲಿಯೂ ಸಂಯಮ ಕಳೆದುಕೊಳ್ಳದೇ ಮುಂದುವರೆಯುವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ಆರೋಗ್ಯ ಉತ್ತಮವಾಗಿ ಕಾಣಿಸುತ್ತಿದೆ. ಆದರೆ ಹೊಸ ಪ್ರಯೋಗಗಳನ್ನು ನಿಮ್ಮ ತ್ವಚೆಯ ಮೇಲೆ ಮಾಡಲು ಹೋಗಿ, ಇಲ್ಲದ ಚರ್ಮ ವ್ಯಾಧಿ ತಂದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಕಣ್ಣಿನ ಸಮಸ್ಯೆ ಸಹ ಆಗಬಹುದು, ಎಚ್ಚರ. ಬಾಳಸಂಗಾತಿ ಜೊತೆ ಹಲವು ಕಾರ್ಯಕ್ರಮಗಳಿಗೆ ಹೋಗಬಹುದು ಹಾಗೂ ಅವರ ಕಡೆಯಿಂದ ಉಡುಗೊರೆ ಸಹ ಸಿಗಲಿದೆ.
ಶುಭ ಸಂಖ್ಯೆ:1

ಸಿಂಹ:
ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವದು. ಮನೆಯಲ್ಲಿ ನೆಮ್ಮದಿ ಇರುವದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವದು. ನಿಮ್ಮ ಮಕ್ಕಳ ಸಾಧನೆ ಸಂತಸ ತರಲಿದೆ. ಮನೆಯಲ್ಲಿ ಸಹ ಮಕ್ಕಳ ಸಹಕಾರ ಸಿಗಲಿದೆ. ನೀವು ಮಾಡುವ ಕೆಲಸ ತಪ್ಪು ಅಪಾರ್ಥ ಆಗಿ, ಕೌಟುಂಬಿಕವಾಗಿ ಸ್ವಲ್ಪ ಕಲಹ ಉಂಟಾಗುತ್ತದೆ. ಆದುದರಿಂದ ಮನೆಯಲ್ಲಿ ವ್ಯವಹರಿಸುವಾಗ ಎಚ್ಚರ ಹಾಗೂ ಮಾತು ಕಡಿಮೆ ಮಾಡಿ.
ಶುಭ ಸಂಖ್ಯೆ:5

ಕನ್ಯಾ:
ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಹಾಡು ಸಂಗೀತದಲ್ಲಿ ಆಸಕ್ತಿ ಮೂಡುತ್ತದೆ. ಸಂಗೀತವನ್ನೇ ವೃತ್ತಿಯಾಗಿ ಸ್ವೀಕರಿಸುವ ಹಂಬಲ ಇರುವವರು ಯಶಸ್ಸು ಕಾಣಬಹುದು. ಸ್ನೇಹಿತರಿಂದ ಅಥವಾ ಸಂಬಂಧಿಗಳಿಂದ ಆರ್ಥಿಕವಾಗಿ ಸಹಾಯ ಆಗಲಿದೆ. ಕಡೇ ಪಕ್ಷ ಸಾಲ ಆದರೂ ಸಿಗಲಿದೆ. ನಿಮ್ಮ ಮಕ್ಕಳ ಆರೋಗ್ಯ ವಿಚಾರದಲ್ಲಿ ಅನಿರೀಕ್ಷಿತ ಖರ್ಚುಗಳು ಬರಲಿದೆ.
ಶುಭ ಸಂಖ್ಯೆ:6

ತುಲಾ:
ಕುಟುಂಬದಲ್ಲಿ ಮನಸ್ತಾಪ ಕಂಡುಬರುವದು. ಗೌಪ್ಯ ವ್ಯವಹಾರಗಳನ್ನು ಸರಿದೂಗಿಸಲು ಸಾಧ್ಯವಾಗದೇ ಪರಿತಪಿಸುವಿರಿ. ಆಸಕ್ತಿ ಆಪತ್ತು ತರುವ ಸಂಭವವಿದೆ. ಮಹತ್ವದ ನಿರ್ಧಾರಗಳಿಗೆ ಇದು ಸೂಕ್ತಕಾಲವಲ್ಲ. ಹಣಹೂಡಿಕೆ ಈಗ ಬೇಡ. ಅತೀ ಉಷ್ಣ ನಿಮ್ಮ ಆರೋಗ್ಯ ಹಾಳು ಮಾಡಲಿದೆ. ರಕ್ತದೊತ್ತಡ ಸಮಸ್ಯೆ ಇರುವವರಿಗೆ ಸಹ ಹೆಚ್ಚಿನ ಸಮಸ್ಯೆಗಳು ಕಾಡಲಿದೆ.ಹೊಲಿಗೆ, ಅಡುಗೆ ಹೀಗೆ ಚಿಕ್ಕ ಪುಟ್ಟ ಸ್ವಂತ ಉದ್ಯೋಗ ಮಾಡುತ್ತಾ ಇರುವವರಿಗೆ ಉತ್ತಮ ಲಾಭ ಇದೆ. ಆದರೆ ಬೇರೆಯವರ ಜೊತೆ ಸೇರಿ ಅಂದರೆ ಪಾರ್ಟ್ ನರ್ ಜೊತೆ ಸೇರಿ ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಮಸ್ಯೆ ಆಗುತ್ತದೆ.
ಶುಭ ಸಂಖ್ಯೆ:8

ವೃಶ್ಚಿಕ:
ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಕೌಟುಂಬಿಕವಾಗಿ ಉತ್ತಮವಾಗಿರುತ್ತದೆ. ಬಹಳ ಮುಖ್ಯವಾಗಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಲಭಿಸುತ್ತದೆ. ಈ ಹಿಂದೆ ಇದ್ದ ಜಗಳ- ಮನಸ್ತಾಪ ಎಲ್ಲ ಶಮನ ಆಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಪತಿ ಹಾಗೂ ಮಕ್ಕಳ ಸಹಕಾರ ಸಿಗುತ್ತದೆ. ಹೊಸದೊಂದು ವ್ಯಾಪಾರ ಮಾಡುವ ಮನಸಾಗುತ್ತದೆ.
ಶುಭ ಸಂಖ್ಯೆ:3

ಧನು:
ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ತೈಲ ವ್ಯಾಪಾರಿಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರಿಗಳಿಗೆ ಲಾಭ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಗಾಗಿ ಯಾರ ಶಿಫಾರಸು ಅವಶ್ಯ ಇರುವುದಿಲ್ಲ. ಸಂತಾನ ಅಪೇಕ್ಷಿಗಳು ಸಿಹಿ ಸುದ್ದಿ ಕೇಳುವ ಸಾಧ್ಯತೆಗಳಿವೆ
ಶುಭ ಸಂಖ್ಯೆ:2

ಮಕರ:
ಸ್ವಜನರಲ್ಲಿ ಮನಸ್ತಾಪ. ದೇಹಾರೋಗ್ಯವೂ ಸರಿಯಿರದೆ ತಾಪದಾಯಕವಾಗುತ್ತದೆ. ಆದರೆ ಶ್ರೇಷ್ಠ ಜನರಿಂದ ಪುರಸ್ಕಾರ. ಸಾಂಸಾರಿಕ ದೃಷ್ಟಿಯಲ್ಲೂ ತೃಪ್ತಿದಾಯಕವಿದ್ದು ನೆಮ್ಮದಿ ಉಂಟಾಗುತ್ತದೆ. ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ. ಬಹಳ ಜಾಗರೂಕರಾಗಿರಿ. ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ದಿನಗಳು ಉರುಳಿದಂತೆ ಬದಲಾವಣೆಗಳು ಕಂಡುಬರುತ್ತವೆ.
ಶುಭ ಸಂಖ್ಯೆ:1

ಕುಂಭ:
ನಿಧಾನವಾಗಿ ಕಾರ್ಯಸಿದ್ಧಿಯಾಗುವದು. ಮಕ್ಕಳಲ್ಲಿ ಹೊಸಹುರುಪು ಕಂಡು ಬರುವದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ. ವಿವಾಹ ವಿಚಾರದಲ್ಲಿ ಸಮಸ್ಯೆ ಆಗಬಹುದು. ನಿಶ್ಚಿತ ವಿವಾಹ ಸಹ ವಿಘ್ನಗಳಿಗೆ ಬಲಿ ಆದಲ್ಲಿ ಆಶ್ಚರ್ಯವಿಲ್ಲ! ತೈಲ ಹಾಗೂ ಔಷಧ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಆಗಿ ಲಾಭ ಬರುವಂತೆ ಕಾಣಿಸುತ್ತಿದೆ. ವಿದೇಶ ಪ್ರಯಾಣದ ಆಸೆಗಳಿದ್ದಲ್ಲಿ ಸ್ವಲ್ಪ ಕಷ್ಟ ಆಗಬಹುದು. ಹೊಸ ವಾಹನ ಖರೀದಿ ಆಲೋಚನೆಗಳಿದ್ದಲ್ಲಿ ಸಂತೋಷವಾಗಿ ಖರೀದಿಸಿ, ಸಮಸ್ಯೆ ಇಲ್ಲ.ನಿಮ್ಮಲ್ಲಿ ಅದ್ಭುತ ಪ್ರತಿಭೆಯಿದೆ, ಅದನ್ನು ಗುರುತಿಸಬೇಕಷ್ಟೆ. ನಿಮ್ಮ ನೆನಪಿನ ಶಕ್ತಿ ಉತ್ತಮವಾಗುತ್ತದೆ.
ಶುಭ ಸಂಖ್ಯೆ:9

ಮೀನ:
ಆಗುವುದೆಲ್ಲ ಒಳಿತೆಂಬ ಭಾವನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರದ ನೆಲೆ ದೊರಕಿ ಹರ್ಷ. ಮಹಿಳೆಯರಿಗೆ ಮನೆಯಲ್ಲಿನ ಆಂತರಿಕ ವಿರಸ ನೀಗಿ ಸೌಹಾರ್ದತೆ. ನೂತನ ವಿವಾದ ಹುಟ್ಟುಹಾಕದ ಹಾಗೆ ತಾಳ್ಮೆಯಡಿ ವರ್ತನೆ. ವ್ಯಾಪಾರಿಗಳಿಗೆ ಉತ್ತಮ ಕಾಲ. ಸ್ನೇಹಿತರಿಂದ ಸಾಲ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ನೀವು ಏನು, ಸಂಸ್ಥೆಗೆ ನಿಮ್ಮ ಅನಿವಾರ್ಯ ಎಷ್ಟಿದೆ ಎಂಬುದನ್ನು ತೋರಿಸುತ್ತೀರಿ. ಅಂಥ ಅವಕಾಶ ಲಭಿಸುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಯೋಗವಿದೆ. ಆದರೆ ಕೆಲ ದಿನಗಳು ಕಾಯಬೇಕಾಗಬಹುದು.ಸರಕಾರಿ ಕೆಲಸ ಕಾರ್ಯಗಳು ಮಾಡಿಸಬೇಕಿದ್ದಲ್ಲಿ ಸಹ ಅದೇ ಸಮಯದಲ್ಲಿ ಪ್ರಯತ್ನ ಮಾಡಿದರೆ ಯಶಸ್ಸಾಗುವ ಸಾಧ್ಯತೆ ಹೆಚ್ಚು ಇದೆ.
ಶುಭ ಸಂಖ್ಯೆ:4

- Advertisement -
spot_img

Latest News

error: Content is protected !!