Friday, March 29, 2024
Homeಜ್ಯೋತಿಷ್ಯಭಾನುವಾರದ ನಿತ್ಯಭವಿಷ್ಯ: ಹೇಗಿರಲಿದೆ ನಿಮ್ಮ ಈ ದಿನದ ರಾಶಿಫಲ..?

ಭಾನುವಾರದ ನಿತ್ಯಭವಿಷ್ಯ: ಹೇಗಿರಲಿದೆ ನಿಮ್ಮ ಈ ದಿನದ ರಾಶಿಫಲ..?

spot_img
- Advertisement -
- Advertisement -

ಮೇಷ ರಾಶಿ
ನಿಮ್ಮ ಹಾಗೂ ಸಂಗಾತಿಯ ನಡುವೆ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುತ್ತದೆ. ಮನೆಯ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳಿವೆ. ಬೆಲೆಬಾಳುವ ಆಭರಣ ಖರೀದಿಸುವಿರಿ. ವಿವಾಹಿತ ಜನರು ಸಂತಾನ ಅಪೇಕ್ಷಿಸುವರು. ಕಚೇರಿಯಲ್ಲಿ ಮೇಲಾಧಿಕಾರಿ ಒತ್ತಡ. ಕುಟುಂಬದಲ್ಲಿ ಮಧ್ಯಸ್ತಿಕೆಯ ಜನರಿಂದ ಅಪಶ್ರುತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮ್ಮ ಪ್ರಾಮಾಣಿಕ ಪ್ರಯತ್ನ ಖಂಡಿತವಾಗಿ ಯಶಸ್ಸು ತರಲಿದೆ. ಹಣ ಹೂಡಿಕೆ ಮಾಡಲು ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ. ನೀವು ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆದುಕೊಳ್ಳಿ.

ವೃಷಭ ರಾಶಿ
ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ. ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ, ಗುಪ್ತಧನದ ಆಸೆ,ಸಂಗಾತಿಯಿಂದ ಅನುಕೂಲದ ನಿರೀಕ್ಷೆ, ಮಕ್ಕಳ ಸಂಸಾರದ ಭಾದೆ, ತಾಯಿಯಿಂದ ಧನಸಹಾಯ, ಉಡಾಫೆತನದಿಂದ ಹಿನ್ನಡೆಗಳು, ದಾಯಾದಿಗಳಿಂದ ಅನುಕೂಲ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ

ಮಿಥುನ ರಾಶಿ
ಮಹಿಳೆಯರು ಕಠಿಣ ಸವಾಲು ಎದುರಿಸುವಿರಿ, ವ್ಯಾಪಾರಿಗಳಿಗೆ ಆರ್ಥಿಕ ಹಿನ್ನಡೆ, ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ, ತುಂಬಾ ಕಷ್ಟದಲ್ಲಿ ಇದ್ದವರು ಚೇತರಿಕೆ ಕಾಣುವರು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ರಾಜಕಾರಣಿಗಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳಿಂದ ಹೆಚ್ಚಿನ ನಿರೀಕ್ಷೆ ಸಫಲತೆ ಪಡೆಯುವಿರಿ. ಕುಟುಂಬದ ಪದೇಪದೇ ಕಲಹಗಳಿಂದ ಮಾನಸಿಕ ಅಶಾಂತಿ ಹೆಚ್ಚುತ್ತಿದೆ, ಮಾಡುತ್ತಿರುವ ಕಾರ್ಯಗಳಲ್ಲಿ ಮೇಲಧಿಕಾರಿಯಿಂದ ಅಡಚಣೆ ಸಂಭವ, ಆಕಸ್ಮಿಕ ಧನ ಪ್ರಾಪ್ತಿ ಯೋಗವಿದೆ, ಸರಕಾರಿ ಉದ್ಯೋಗ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಭಾಗ್ಯ, ಹಿತೈಷಿಗಳಿಂದ ಸದಾ ನಿಮ್ಮ ಬಗ್ಗೆ ನಿಂದನೆ, ಕೊನೆಯಲ್ಲಿ ಜಯ ನಿಮಗೆ ಸಿಗುತ್ತದೆ,

ಕರ್ಕಾಟಕ ರಾಶಿ
ಹಿತೈಷಿಗಳಿಂದ ಅಪಮಾನವಾಗುವ ಸಾಧ್ಯತೆ, ಸಂಜೆಯೊಳಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ, ಹೊಸ ಯೋಜನೆ ಪ್ರಾರಂಭದಿಂದ ಮನಸ್ಸು ಖುಷಿ, ಆರ್ಥಿಕತೆ ಚೇತರಿಕೆ, ಬಹುದಿನದ ಸಾಲ ಮತ್ತು ಕಷ್ಟ ದೂರವಾಗಲಿದೆ, ಮಕ್ಕಳಿಗೆ ಸರಕಾರದ ಉದ್ಯೋಗ ಕುಟುಂಬದಲ್ಲಿ ಸಂತೋಷದ ವಾತಾವರಣ ಪ್ರಾಪ್ತಿಯಾಗಲಿದೆ, ಮುನಿಸಿಕೊಂಡಿರುವ ಪತ್ನಿಯ ಮರಳಿ ನಿಮ್ಮ ಮನೆಗೆ ಬರುವ ಸಾಧ್ಯತೆ, ನಂತರ ನಿಮ್ಮ ಕಷ್ಟನಷ್ಟಗಳಿಗೆ ಭಾಗಿಯಾಗಿ ನಿಮ್ಮನ್ನು ಹಾರೈಕೆ ಮಾಡಲಿದ್ದಾರೆ,

ಸಿಂಹ ರಾಶಿ
ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರ ಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ.

ಕನ್ಯಾ ರಾಶಿ
ಮನಸ್ತಾಪದ ಸಂಬಂಧಿಗಳು ಹತ್ತಿರವಾಗಲಿವೆ. ನಿಮ್ಮ ಮತ್ತು ಸಂಗಾತಿಯ ವೈಯಕ್ತಿಕ ವ್ಯವಹಾರಿಕ ಮತ್ತು ಪ್ರಣಯ ಸಂಬಂಧಗಳು ಒಳಗೊಂಡಿದೆ. ಹಣಕಾಸು ಸ್ಥಿತಿ ಉತ್ತಮವಾಗಿದೆ, ಆದರೆ ಖರ್ಚುವೆಚ್ಚ ನಿಮ್ಮ ಹಿಡಿತದಲ್ಲಿರಲಿ. ವೃತ್ತಿಜೀವನದ ಒತ್ತಡವಿದ್ದರೂ ನೆಮ್ಮದಿ ತರಲಿದೆ. ಸಹೋದ್ಯೋಗಿಗಳ ಸಹಕಾರ ಕಚೇರಿ ಹಾಗೂ ವಾತಾವರಣ ಹಿತಕರವಾಗಿದೆ. ಯುವಕರು ನಿಮ್ಮ ಯಶಸ್ವಿಗಾಗಿ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಕೌಶಲ್ಯಗಳನ್ನು ಪಡೆದುಕೊಳ್ಳುವುದು ಉತ್ತಮ. ಕೆಲಸದ ಸ್ಥಳದಲ್ಲಿ ಸಂಮಹನ ಮುಖ್ಯವಾಗುತ್ತದೆ. ವರ್ಗಾವಣೆ ಪ್ರಯತ್ನಿಸಿದರೆ ಒಳಿತು. ನಿಮ್ಮ ದೌರ್ಜನ್ಯ ಯಾವುದು ಸರಿ ಯಾವುದು ತಪ್ಪು ಎನ್ನುವುದು ನಿಮ್ಮ ಅರಿವಿಗೆ ಬರಲಿದೆ.

ತುಲಾ ರಾಶಿ
ನೂತನ ಗೃಹ ನಿರ್ಮಾಣದ ಚಿಂತನೆ ನಡೆಸಲಿದ್ದೀರಿ, ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪದೋನ್ನತಿ, ಹಿನ್ನೆಲೆ ಗಾಯಕರಿಗೆ, ಶಾಸ್ತ್ರೀಯ ಸಂಗೀತ, ರಂಗಭೂಮಿ ಕಲಾವಿದರಿಗೆ, ಚಲನಚಿತ್ರ ಕಲಾವಿದರಿಗೆ, ಸಂಗೀತಗಾರರಿಗೆ ಬೇಡಿಕೆ ಹೆಚ್ಚಾಗಲಿದೆ, ನಿಮ್ಮ ಪ್ರತಿಭೆಯ ಉತ್ತಮ ಅವಕಾಶ ದೊರಕಲಿದೆ, ರಹಸ್ಯ ವಿಚಾರ ಕಾಪಾಡಿಕೊಂಡು ಬಂದಿದ್ದು ಈಗ ಬಹಿರಂಗವಾಗಲಿದೆ, ಹೊಸ ಯೋಜನೆ ಪ್ರಾರಂಭಿಸುವ ಮುನ್ನ ತರಬೇತಿ ಪಡೆಯುವುದು ಉತ್ತಮ,

ವೃಶ್ಚಿಕ ರಾಶಿ
ಹಣಕಾಸಿನ ಅಡಚಣೆಯಿಂದ ಗೃಹನಿರ್ಮಾಣ ಕಾರ್ಯ ಮುಂದೂಡ ಬೇಕಾದ ಪರಿಸ್ಥಿತಿ ವಿದೇಶ ಪ್ರಯಾಣ ಅತಂತ್ರ, ಪಿತ್ರಾರ್ಜಿತ ಆಸ್ತಿ ದೊರಕಲಿದೆ, ಆರೋಗ್ಯ ಸುಧಾರಣೆಯಾಗಲಿದೆ, ಸರಕಾರದಿಂದ ಸಹಾಯಧನ ದೊರಕುವ ಸಾಧ್ಯತೆ, ಪತ್ನಿಯ ಸಲಹೆಯಿಂದಾಗಿ ವ್ಯವಹಾರದಲ್ಲಿ ಉತ್ತಮ ಫಲಿತಾಂಶ, ಮಹಿಳಾ ರಾಜಕಾರಣಿಗಳಿಗೆ ಯಶಸ್ಸು, ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಹೆಚ್ಚಿನ ಪ್ರೋತ್ಸಾಹ ಸಹಕಾರ ದೊರಕಲಿದೆ, ಕುಟುಂಬದಲ್ಲಿ ಮತ್ತು ವೃತ್ತಿಯಲ್ಲಿ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ, ಉದ್ಯೋಗಸ್ಥರಿಗೆ ಮಹಿಳೆಯರಿಗೆ ಬಡ್ತಿ ಭಾಗ್ಯ, ಸಿದ್ದ ಉಡುಪು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ವಿವಾಹ ಆಕಾಂಕ್ಷಿಗಳಿಗೆ ಸೂಕ್ತ ಸಂಗಾತಿ ಲಭ್ಯವಾಗುವ ಸಾಧ್ಯತೆ,

ಧನಸು ರಾಶಿ
ವ್ಯಾಪಾರ ಕ್ಷೇತ್ರದಲ್ಲಿ ಅಡಚಣೆಗಳು ಕಾಡುವವು, ಹೊಸ ವ್ಯವಹಾರ ಕಾರ್ಯಕ್ಕೆ ಒಪ್ಪಂದವನ್ನು ಅನುಮೋದನೆ ಮಾಡಲಿದ್ದೀರಿ, ಸಣ್ಣ ಕೈಗಾರಿಕೆ ಸಣ್ಣ ವ್ಯಾಪಾರ ಧನಲಾಭ, ತಂದೆಯ ಸಹಾಯದಿಂದ ನಿಮಗೆ ಆಸ್ತಿ ಸಿಗುವುದು, ನಿಮ್ಮ ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರಲು ಇದ್ದೀರಿ, ರಾಜಕಾರಣಿಗಳು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ, ನಿಮ್ಮ ಕೀರ್ತಿ ಗೌರವ ಪ್ರತಿಷ್ಠೆ ಜನಪ್ರಿಯತೆ ಹೆಚ್ಚಾಗುವುದು, ರೇಸ್ ಕೋರ್ಸ್ ಕೈಗೆ ಬರುವ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತದೆ. ಸಂತಾನ ಸಿಹಿಸುದ್ದಿ,

ಮಕರ ರಾಶಿ
ಸಣ್ಣ ಕೈಗಾರಿಕೆ ಪ್ರಾರಂಭದ ಚಿಂತನೆ, ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರ ಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ.

ಕುಂಭ ರಾಶಿ
ನಿಮ್ಮ ಕನಸಿನ ಯೋಜಿತ ಕಾರ್ಯಗಳು ನನಸಾಗುವ ಸಂದರ್ಭ ಎದುರಾಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ದಿನವಿದು. ಸನ್ಯಾಸಿಯ ಮನಸ್ಥಿತಿ ನಿಮ್ಮ ವಿಚಾರಗಳಿಗೆ ವಿರುದ್ಧವಾಗಿ ವರ್ತಿಸಬಹುದು. ಹೊಸ ವಾಹನ ಖರೀದಿ ಪ್ರಕ್ರಿಯೆಗಳನ್ನು ಈಗ ಸದ್ಯಕ್ಕೆ ಬೇಡ.ಬಂಡವಾಳದ ಸಮಸ್ಯೆಗೆ ಪರಿಹಾರ ದೊರಕಲಿದೆ. ಮಕ್ಕಳ ಬೆಳವಣಿಗೆಗಾಗಿ ನೀವು ಅವರಿಗೆ ಸಹಕಾರ ನೀಡುವುದು ಒಳ್ಳೆಯದು. ಹೊಸತನದ ಆಲೋಚನೆ ನಿಮಗೆ ಶುಭದಾಯಕ ಕ್ಷಣಗಳನ್ನು ದಯಪಾಲಿಸುತ್ತದೆ.

ಮೀನ ರಾಶಿ
ಮಾತಾಪಿತೃ ಗಳಿಂದ ಆಸ್ತಿ ಸಿಗುವ ಸಂಭವ. ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ವಿಶೇಷ ಗೌರವ ಮನ್ನಣೆ ದೊರೆಯುತ್ತದೆ, ಮದುವೆ ಯೋಜನೆಯಲ್ಲಿ ಇದ್ದೀರಿ. ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಒತ್ತಡ ಹೆಚ್ಚಾಗುವುದು. ಎಲ್ಲಾ ತರಹದ ಗುತ್ತಿಗೆದಾರರಿಗೆ ಬಾಕಿ ಹಣ ವಸೂಲಾತಿ. ನಿಮ್ಮ ಅಡೆತಡೆಗಳು ನಿವಾರಣೆಯಾಗುವುದು, ಹೊಸ ಕೆಲಸದ ಟೆಂಡರಗಳು ನಿಮ್ಮ ಕೈಸೇರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಮುಂಜಾಗ್ರತೆ ಅವಶ್ಯಕವಾಗಿದೆ, ಧನಲಾಭ ತುಂಬಾ ನಿರೀಕ್ಷಣೆ ಮಾಡುವಿರಿ. ಬಂಗಾರದ ಉದ್ದಿಮೆದಾರರಿಗೆ ಸಗಟು ತಯಾರಿಕೆ ಬೇಡಿಕೆ ಹೆಚ್ಚಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ತೊಂದರೆ ಇದ್ದರೂ ಬದಲಾವಣೆ ಬೇಡ.

- Advertisement -
spot_img

Latest News

error: Content is protected !!