Saturday, May 4, 2024
Homeಜ್ಯೋತಿಷ್ಯಗುರುವಾರದ ರಾಶಿಭವಿಷ್ಯ: ಯಾವ ರಾಶಿಯವರಿಗೆ ಇಂದು ರಾಯರ ಅನುಗ್ರಹವಿದೆ ?

ಗುರುವಾರದ ರಾಶಿಭವಿಷ್ಯ: ಯಾವ ರಾಶಿಯವರಿಗೆ ಇಂದು ರಾಯರ ಅನುಗ್ರಹವಿದೆ ?

spot_img
- Advertisement -
- Advertisement -

ಮೇಷ: ಆರ್ಥಿಕವಾಗಿ ಭಾಗ್ಯ ಸಂಪತ್ತು ಪ್ರಕಟವಾಗುತ್ತದೆ. ಸಾಂಸಾರಿಕವಾಗಿ ವಿವಾಹಾದಿ ಶುಭಮಂಗಲ ಕಾರ್ಯ ಗಳ ಚಿಂತನೆಗಳು ಸದ್ಯದಲ್ಲೇ ಅನುಕೂಲಕರವಾಗಲಿದೆ. ಕಟ್ಟಡ ಕಾರ್ಯದವರಿಗೆ ಲಾಭಾಂಶ ಹೆಚ್ಚಲಿದೆ.

ವೃಷಭ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚಲಿದೆ. ನಿಮ್ಮ ವಿರೋಧಿಗಳಿಗೆ ಇದು ಅಪಜಯದ ಸಮಯ. ಆಕಸ್ಮಿಕವಾಗಿ ಧನ-ಸಂಪತ್ತು ಕೈಗೂಡಲಿದೆ. ಆರೋಗ್ಯದಲ್ಲಿ ಮಾತ್ರ ಉದಾಸೀನತೆ ಸಲ್ಲದು.

ಮಿಥುನ: ನಿಮ್ಮ ನಡೆ ನುಡಿ ಒಂದೇ ತರವಿರಲಿ. ಧನಾಗಮನ ಸುಗಮವಿದ್ದರೂ ಯಾವುದೇ ರೀತಿಯಲ್ಲಿ ಖರ್ಚಿಗೆ ಮಾರ್ಗಗಳು ಗೋಚರಿಸಲಿದೆ. ಸಾಂಸಾರಿಕವಾಗಿ ಪಾಪಪ್ರಜ್ಞೆ ಆಗಾಗ ಕಾಡಲಿದೆ. ಅತಿಥಿಗಳ ಆಗಮನವಿದೆ.

ಕರ್ಕ: ಸರಕಾರೀ ಕೆಲಸಗಳು ಅನಾವಶ್ಯಕವಾಗಿ ಧನವ್ಯಯಕ್ಕೆ ಕಾರಣವಾದೀತು. ಬಂದ ದುಃಖವನ್ನು ಧೈರ್ಯದಿಂದ ಎದುರಿಸುವುದು. ಹಿತೈಷಿಗಳ ಸೂಕ್ತ ಸಲಹೆಗಳನ್ನು ಸ್ವೀಕರಿಸಿ ಮುನ್ನಡೆವ ಅವಶ್ಯಕತೆ ಕಂಡುಬರಲಿದೆ.

ಸಿಂಹ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಅವಕೃಪೆ ಕಂಡುಬರುತ್ತದೆ. ವ್ಯಾಪಾರ, ವ್ಯವಹಾರಗಳು ತುಸು ನೆಮ್ಮದಿ ತಂದರೂ ವಂಚಕರ ಕುತಂತ್ರಕ್ಕೆ ಆಸ್ಪದವಿರುತ್ತದೆ. ವಿದ್ಯಾರ್ಥಿಗಳಿಗೆ ಅಭಿವೃದ್ಧಿಯು ತೋರಿಬರುವುದು.

ಕನ್ಯಾ: ಸಾರ್ವಜನಿಕ ಕೆಲಸಕಾರ್ಯಗಳು ನಿಮಗೆ ಗೌರವವನ್ನು ತಂದುಕೊಡುತ್ತವೆ. ವೈಯಕ್ತಿಕ ಸಮಸ್ಯೆಗಳನ್ನು ನೀವಾಗಿಯೇ ಬಗೆಹರಿಸಿಕೊಳ್ಳುವುದು ಉತ್ತಮ. ಅವಿವಾಹಿತರಿಗೆ ಕಂಕಣಬಲದ ಯೋಗವು ಒದಗಿ ಬರುವುದು.

ತುಲಾ: ಕಾರ್ಯಕ್ಷೇತ್ರದಲ್ಲಿ ಶತ್ರುಗಳು ನಿವಾರಣೆಯಾದರೂ ಭಯಭೀತಿ ತೊಲಗದು. ಆಗಾಗ ಧನಚಿಂತೆಯು ತೋರಿಬಂದು ಆತಂಕಕ್ಕೆ ಕಾರಣವಾಗಲಿದೆ. ನೌಕರ ವರ್ಗಕ್ಕೆ ಮುಂಭಡ್ತಿಯ ಯೋಗವಿದೆ. ಲಾಭಾಂಶವು ಹೆಚ್ಚಲಿದೆ.

ವೃಶ್ಚಿಕ: ಕೌಟುಂಬಿಕವಾಗಿ ಸಹೋದರರ ಸಹಕಾರಕ್ಕೆ ಸಂಚು ಕಂಡುಬರುವುದು. ಶತ್ರುಬಾಧೆ ಕಂಡುಬರಲಿದೆ. ಕಾರ್ಯರಂಗದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಅವಸರ ಮಾಡಬೇಡಿರಿ.

ಧನು: ಕೃಷಿ, ತರಕಾರೀ ಧಾನ್ಯ ಮಾರಾಟ ಮುಂತಾದ ವೃತ್ತಿಯಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಬೇಕಾಗುತ್ತದೆ. ಹಿರಿಯ ವರ್ಗದವರಿಗೆ ಪುಣ್ಯಸ್ಥಳಗಳ ಸಂದರ್ಶನ ಯೋಗವಿರುತ್ತದೆ.

ಮಕರ: ಮಹಿಳೆಯರು ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗೆ ಒಳಗಾದಾರು. ಅಸೂಯೆ ಪಡುವ ಜನರಿಂದಾಗಿ ಅನಾವಶ್ಯಕ ಅಪವಾದ ಭೀತಿ ಕಂಡುಬಂದೀತು. ಆಗಾಗ ಗೃಹ ತಾಪತ್ರಯಗಳು ಹೆಚ್ಚಾಗಿ ತಲೆಕೆಡಲಿದೆ.

ಕುಂಭ: ಉದ್ಯೋಗದಲ್ಲಿ ಕಿರಿಕಿರಿಗಳು, ಅಡೆತಡೆ, ಆತಂಕಗಳು ಎದುರಾದೀತು. ಋಣಭಾಧೆ ನಿವಾರಣೆಯಿಂದ ಸಮಾಧಾನವಾಗಲಿದೆ. ಕೌಟುಂಬಿಕವಾಗಿ ವಾದ ವಿವಾದಗಳು ಸುತ್ತಿಕೊಳ್ಳದಂತೆ ಜಾಗ್ರತೆ ವಹಿಸಿರಿ.

ಮೀನ: ಒಡವೆ, ವಸ್ತುಗಳ ಖರೀದಿಯಿಂದ ಪತ್ನಿಗೆ ಸಂಭ್ರಮವಾದೀತು. ಆಗಾಗ ಉಷ್ಣ ಪ್ರಕೋಪದಿಂದ ಶರೀರದಲ್ಲಿ ಬಾಧೆ ಕಾಣಿಸಲಿದೆ. ಅವಿವಾಹಿತರಿಗೆ ವೈವಾಹಿಕ ಭಾಗ್ಯ ಕಂಡುಬಂದೀತು. ಮುಂದುವರಿಯಿರಿ.

- Advertisement -
spot_img

Latest News

error: Content is protected !!