Monday, June 30, 2025
Homeಜ್ಯೋತಿಷ್ಯಗುರುವಾರದ ರಾಶಿಫಲ: ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ..

ಗುರುವಾರದ ರಾಶಿಫಲ: ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಿ..

spot_img
- Advertisement -
- Advertisement -

ಮೇಷ: ಜಟಿಲ ಸಮಸ್ಯೆ ನಿವಾರಣೆಯಾಗಿ ನೆಮ್ಮದಿ. ಸಂಗಾತಿಯೊಂದಿಗೆ ಸಂತೋಷ ಹಂಚಿಕೊಳ್ಳಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 8

ವೃಷಭ: ನಿಮ್ಮ ಕಾರ್ಯವೈಖರಿಯಿಂದ ಮೇಲಧಿಕಾರಿಗಳ ಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ. ಶುಭಸಂಖ್ಯೆ: 8

ಮಿಥುನ: ಆಸ್ತಿ ವಿಚಾರದಲ್ಲಿ ನಿರ್ಧಾರಕ್ಕೆ ಮುನ್ನ ಕುಟುಂಬ ದೊಂದಿಗೆ ಸಮಾಲೋಚಿಸಿ. ವ್ಯಾಪಾರವನ್ನು ಪ್ರಾರಂಭಿಸಲು ನಿರ್ಧಾರ. ಶುಭಸಂಖ್ಯೆ: 6

ಕಟಕ: ನಕಾರಾತ್ಮಕ ಯೋಚನೆಗಳಿಂದ ಮಾನಸಿಕ ಅಶಾಂತಿ. ಯೋಜನೆಯ ಕಾರ್ಯಸಿದ್ದಿಗೆ ಅಡ್ಡಿ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 7

ಸಿಂಹ: ನಿಮ್ಮ ಪ್ರತಿಭೆಗೆ ವಿಶೇಷ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗ ಬಹುದು. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 1

ಕನ್ಯಾ: ಆತ್ಮಾಭಿಮಾನಕ್ಕೆ ಧಕ್ಕೆಯಾಗುವ ಘಟನೆ ನಡೆಯಬಹುದು. ಪ್ರಭಾವಿಗಳೊಂದಿಗೆ ಸಂಪರ್ಕ. ಇತಿಮಿ-ತಿ ಅರಿತು ಕೆಲಸ ಮಾಡಿ. ಶುಭಸಂಖ್ಯೆ: 3

ತುಲಾ: ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೇಟಿ. ಅನಿರೀತ ತಿರುವು. ತಂದೆಯ ಆರೋಗ್ಯದ ಕಡೆ ಗಮನವಿರಲಿ. ಶುಭಸಂಖ್ಯೆ: 6

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಮುಖ್ಯ. ಸಾಧನೆಗೆ ತಕ್ಕ ಪ್ರತಿಫಲ ಸಿಗಲಿದೆ. ದೂರ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 2

ಧನು: ಕುಟುಂಬದವರ ಆತ್ಮವಿಶ್ವಾಸ ಹೆಚ್ಚುವಂತೆ ನಡೆ ಇರಲಿ. ಚಿತ್ರನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 8

ಮಕರ: ಸ್ವಯಂ ಉದ್ಯೋಗಿಗಳಿಗೆ ಅನಿರೀತ ಯಶಸ್ಸು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ: 6

ಕುಂಭ: ಸಗಟು ವ್ಯಾಪಾರಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಆತಂಕ ದೂರ. ಉದರ ಸಂಬಂಧಿ ತೊಂದರೆ ಬರಬಹುದು. ಶುಭಸಂಖ್ಯೆ: 2

ಮೀನ: ಕುಟುಂಬದ ವಿಷಯ ಯೋಚಿಸಿ ತೀರ್ಮಾನ ಕೈಗೊಳ್ಳಿ. ಹೊಸ ವ್ಯಾಪಾರ ಆರಂಭಕ್ಕೆ ಶುಭದಿನ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 7

- Advertisement -
spot_img

Latest News

error: Content is protected !!