Tuesday, April 30, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ರಾಯರ ಅನುಗ್ರಹ ಯಾವ ರಾಶಿಯ ಮೇಲಿರಲಿದೆ ?

ಗುರುವಾರದ ನಿತ್ಯಭವಿಷ್ಯ: ರಾಯರ ಅನುಗ್ರಹ ಯಾವ ರಾಶಿಯ ಮೇಲಿರಲಿದೆ ?

spot_img
- Advertisement -
- Advertisement -

ಮೇಷ:
ದಿಟ್ಟತನ, ಮನೋಸ್ಥೈರ್ಯ, ನೇರ, ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು.
ಶುಭ ಸಂಖ್ಯೆ: 8

ವೃಷಭ:
ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವವು. ವೃಥಾ ತಿರುಗಾಟ ಇರುವದು ಆದರೂ ಕೀರ್ತಿದಾಯಕ ಫಲವಿದೆ.
ಶುಭ ಸಂಖ್ಯೆ: 3

ಮಿಥುನ:
ನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮಿ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗಳು ಅನುಕೂಲಕರವಾಗಿ ಮುಂದವರೆಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ.
ಶುಭ ಸಂಖ್ಯೆ: 7

ಕಟಕ:
ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು.
ಶುಭ ಸಂಖ್ಯೆ: 8

ಸಿಂಹ:
ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು.
ಶುಭ ಸಂಖ್ಯೆ: 9

ಕನ್ಯಾ:
ಮಹತ್ವಾಕಾಂಕ್ಷೆಗೆ ಪೂರಕವಾದ ವಾತಾವರಣ ಇರುವುದು. ಬಂಧುಮಿತ್ರರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯಲ್ಲಿ ಸಂತಸ ಮೂಡುವುದು. ಶುಭಕಾರ್ಯಗಳು ಜರುಗುವವು.
ಶುಭ ಸಂಖ್ಯೆ: 5

ತುಲಾ:
ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವುದು. ವಿದೇಶ ಪ್ರಯಾಣದ ಯೋಗವಿದೆ.
ಶುಭ ಸಂಖ್ಯೆ: 7

ವೃಶ್ಚಿಕ:
ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.
ಶುಭ ಸಂಖ್ಯೆ: 4

ಧನಸ್ಸು:
ವ್ಯಾಪಾರದಲ್ಲಿ ಪ್ರಗತಿ ಇರುವುದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು.
ಶುಭ ಸಂಖ್ಯೆ: 6

ಮಕರ:
ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವುದು.
ಶುಭ ಸಂಖ್ಯೆ: 4

ಕುಂಭ:
ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ.
ಶುಭ ಸಂಖ್ಯೆ: 1

ಮೀನ:
ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವುದು. ಹಳೆಯ ಸಾಲ ತೀರುವುದು. ಅನೇಕ ಮೂಲಗಳಿಂದ ಧನ ಪ್ರಾಪ್ತಿಯ ಯೋಗವಿದೆ. ಬಂಧುವರ್ಗದಲ್ಲಿಯ ಅಸಮಾಧಾನಗಳು ಪರಿಹಾರವಾಗುವವು.
ಶುಭ ಸಂಖ್ಯೆ: 1

- Advertisement -
spot_img

Latest News

error: Content is protected !!