Wednesday, June 24, 2026
Homeಕರಾವಳಿಉಡುಪಿಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕಾಂತಾರ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಡಿ ವಿ ಸದಾನಂದ ಗೌಡ

ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕಾಂತಾರ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಡಿ ವಿ ಸದಾನಂದ ಗೌಡ

- Advertisement -
- Advertisement -

ಬೆಂಗಳೂರು; ಎಲ್ಲೆಡೆ ಕಾಂತಾರ ಸಿನಿಮಾದ್ದೇ ಮಾತು. ಸಿನಿಮಾ ನೋಡೋದವರನ್ನು ಥಿಯೇಟರ್ ಅಂಗಳಕ್ಕೆ ಕರೆ ತಂದಿದೆ ಈ‌ ಮೂವಿ. ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು‌ ಕೂಡ ಸಿನಿಮಾಗೆ ಫಿದಾ ಆಗಿದ್ದಾರೆ.ಅವರು ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ರು.

ಈ ಬಗ್ಗೆ ಫೇಸ್ ಬುಕ್ ನಲ್ಲು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ತುಳು ನಾಡಿನ ಸಂಸ್ಕೃತಿ, ಪರಂಪರೆಯನ್ನು   ಜಗತ್ತಿಗೆ ಸಾರಿ‌ ತೋರಿಸಿದ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿರವರ “ಕಾಂತಾರ” ಚಲನಚಿತ್ರವನ್ನು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಸಚಿವರುಗಳಾದ ಆರ್ . ಅಶೋಕ್, ಡಾ. ಅಶ್ವತ್ಥ್ ನಾರಾಯಣ್,  ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ನನ್ನ ಕುಟುಂಬದೊಂದಿಗೆ ವೀಕ್ಷಿಸಿದೆನು ಎಂದು ಬರೆದುಕೊಂಡಿದ್ದಾರೆ.

ಗ್ರ ಹ

ತುಳು ನಾಡಿನ ಆಚರಣೆಗಳಾದ ಕಂಬಳ, ಕೋಲಾ, ಭೂತಾರಾಧನೆ, ದೈವಾರಾಧನೆ ಮತ್ತು ಇಲ್ಲಿನ ಆಚಾರ-ವಿಚಾರಗಳನ್ನು ಅತ್ಯದ್ಭುತವಾಗಿ ಬಿಂಬಿಸಿದ ಚಿತ್ರತಂಡಕ್ಕೆ ಶುಭಕೋರುತ್ತೇನೆ ಎಂದಿದ್ದಾರೆ.

- Advertisement -

Latest News

error: Content is protected !!