Friday, April 26, 2024
Homeಕರಾವಳಿಕರಾವಳಿಯಲ್ಲಿ 'ತೌಕ್ತೆ' ಚಂಡಮಾರುತ ಅಬ್ಬರ: ಮೂವರ ಸಾವು, 3 ಮಂದಿ ನಾಪತ್ತೆ, ಸಂಕಷ್ಟದಲ್ಲಿ 9 ಜನ..

ಕರಾವಳಿಯಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ: ಮೂವರ ಸಾವು, 3 ಮಂದಿ ನಾಪತ್ತೆ, ಸಂಕಷ್ಟದಲ್ಲಿ 9 ಜನ..

spot_img
- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ ತೀವ್ರವಾಗಿದೆ. ಮಂಗಳೂರಿನ ಎಂಆರ್ಪಿಎಲ್ ಗೆ ಸಂಬಂಧಿಸಿದ ಟಗ್ ಬೋಟ್ ಗಳು ಮುಳುಗಡೆಯಾಗಿ ಮೂವರು ಸಾವನ್ನಪ್ಪಿದ್ದಾರೆ.

ಮೂವರು ನಾಪತ್ತೆಯಾಗಿದ್ದು, 9 ಮಂದಿ ಅತಂತ್ರರಾಗಿದ್ದಾರೆ. ಲಂಗರು ಹಾಕಿದ ಸ್ಥಳದಲ್ಲಿಯೇ 9 ಮಂದಿ ನೌಕರರು ಸಿಲುಕಿದ್ದಾರೆ. ಚಂಡಮಾರುತದ ನಡುವೆ ಸಮುದ್ರದಲ್ಲಿ ಇರಬೇಕಾಗಿದೆ. ರಾತ್ರಿಪೂರ್ತಿ ಸಮುದ್ರದಲ್ಲಿರುವ ನೌಕರರನ್ನು ರಕ್ಷಿಸಲು ಪ್ರಯತ್ನಿಸಿ ಅಲೆಗಳ ಅಬ್ಬರದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದು, ಮತ್ತೆ ಆರಂಭಿಸಲಾಗಿದೆ.

ಸುರತ್ಕಲ್ ನ 17 ನಾಟಿಕಲ್ ಮೈಲು ದೂರದಲ್ಲಿರುವ ನೌಕರರನ್ನು ರಕ್ಷಿಸಲು ಗಾಳಿ, ಅಲೆಗಳ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ. ಎಂ. ಆರ್. ಪಿ. ಎಲ್‌ಗೆ ತೈಲ ಹೊತ್ತು ತರುವ ಹಡಗುಗಳಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕೆಲಸದಲ್ಲಿ ನಿರತವಾಗಿದ್ದ ಎರಡು ಬೋಟ್ ಗಳು ಚಂಡಮಾರುತದ ಭೀಕರೆತೆಗೆ ತುತ್ತಾಗಿದ್ದು, ಒಟ್ಟು 17 ಜನರು ಸಂಕಷ್ಟಕ್ಕೆ ಸಿಲುಕಿದ್ದರು.

ಒಂದು ಬೋಟ್ ನಲ್ಲಿ 8 ಮಂದಿ ಮತ್ತು ಇನ್ನೊಂದು ಬೋಟ್ ನಲ್ಲಿ 9 ಮಂದಿ ಕಾರ್ಮಿಕರಿದ್ದರು. 8 ಮಂದಿ ಇದ್ದ ಅಲಾಯನ್ಸ್ ಎಂಬ ಹೆಸರಿನ ವಿಗ್ ಬೋಟ್ ಭಾರೀ ಗಾಳಿಗೆ ಮಗುಚಿ ಬಿದ್ದತ್ತು. ಇಬ್ಬರು ಸಮುದ್ರದಲ್ಲಿ ಈಜಿಕೊಂಡೇ ದಡ ಸೇರಿದ್ದಾರೆ.

- Advertisement -
spot_img

Latest News

error: Content is protected !!