Monday, June 30, 2025
Homeಕರಾವಳಿಮಂಗಳೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗೆ ವಂಚಿಸಿದ ಸೈಬರ್ ಕಳ್ಳರು: ಬ್ಯಾಂಕ್ ಖಾತೆಯಿಂದ 6 ಲಕ್ಷ ರೂಪಾಯಿ...

ಮಂಗಳೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗೆ ವಂಚಿಸಿದ ಸೈಬರ್ ಕಳ್ಳರು: ಬ್ಯಾಂಕ್ ಖಾತೆಯಿಂದ 6 ಲಕ್ಷ ರೂಪಾಯಿ ಲಪಟಾಯಿಸಿದ ಖದೀಮರು

spot_img
- Advertisement -
- Advertisement -

ಮಂಗಳೂರು : ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಹಾಗೇ ಬ್ಯಾಂಕ್ ಅಧಿಕಾರಿ ಎಂದಿ ಕರೆ ಮಾಡಿದ ವ್ಯಕ್ತಿಯನ್ನು ನಂಬಿ ಓಪಿಟಿ ಸಂಖ್ಯೆ ಹೇಳಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಮೋಸ ಹೋಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ಅಂತಾ ಹೇಳಿ ಒಟಿಪಿ ನಂಬರ್ ಪಡೆದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಬ್ಯಾಂಖ್ ಖಾತೆಯಿಂದ ಸೈಬರ್ ಖದೀಮರು 6 ಲಕ್ಷ ರೂ. ಗಳನ್ನು ಲಪಟಾಯಿಸಿದ್ದಾರೆ.  ಅಧಿಕಾರಿಯ ಸ್ಟೇಟ್ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಕಡಿತಗೊಂಡಿದ್ದು, ಅದರ ಮರುಪಾವತಿಗೆ ಒಟಿಪಿ ನಂಬರ್ ಹೇಳುವಂತೆ ಕೋರಿದ್ದರು. ಇದನ್ನು ನಿಜವೆಂದು ನಂಬಿದ ನಿವೃತ್ತ ಪೊಲೀಸ್ ಅಧಿಕಾರಿಯ ಪುತ್ರ ಮೊಬೈಲ್ ಗೆ ಬಂದ ಒಟಿಪಿ ಸಂಖ್ಯೆಯನ್ನು ಹೇಳಿದ್ದರು.

ಒಟಿಪಿ ಸಂಖ್ಯೆ ಹೇಳಿದ ಸ್ವಲ್ಪ ಹೊತ್ತಿನಲ್ಲೇ 6.24 ಲಕ್ಷ ರೂ. ಖಾತೆಯಿಂದ ಕಡಿಗೊಂಡಿದೆ. ಇದರಿಂದ ಆತಂಕಗೊಂಡ ಅಧಿಕಾರಿ ಮರುದಿನ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ನವದೆಹಲಿಯ ನಾನಾ ಬ್ಯಾಂಕ್ ಗಳ ಖಾತೆಗಳಿಗೆ ಹಣ ಜಮೆ ಆಗಿರುವುದು ಕಂಡುಬಂದಿದೆ. ಈ ಸಂಬಂಧ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!