Tuesday, July 1, 2025
Homeಕರಾವಳಿಮಂಗಳೂರುಪುತ್ತೂರು; ಕೂರತ್ ತಂಬಳ್ ಉರೂಸ್ ನಲ್ಲಿ ಕೊನೆಯ ದಿನ ನಿರೀಕ್ಷೆಗೆ ಮೀರಿ ಜನ ಭಾಗಿ; 6...

ಪುತ್ತೂರು; ಕೂರತ್ ತಂಬಳ್ ಉರೂಸ್ ನಲ್ಲಿ ಕೊನೆಯ ದಿನ ನಿರೀಕ್ಷೆಗೆ ಮೀರಿ ಜನ ಭಾಗಿ; 6 ಮಂದಿ ನಿತ್ರಾಣಗೊಂಡು ಅಸ್ವಸ್ಥ

spot_img
- Advertisement -
- Advertisement -

ಪುತ್ತೂರು; ಕೂರತ್ ತಂಬಳ್ ಉರೂಸ್ ನಲ್ಲಿ ಕೊನೆಯ ದಿನವಾಜ ಜೂನ್ 29 ರಂದು ನಿರೀಕ್ಷೆಗೆ ಮೀರಿ ಜನ ಭಾಗಿಯಾಗಿದ್ದು 6 ಮಂದಿ ನಿತ್ರಾಣಗೊಂಡು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ಜೂನ್ 26ರಿಂದ 29ರವರೆಗೆ ಆಯೋಜಿಸಲಾಗಿದ್ದ ಉರೂಸ್‌ನ ಅಂತಿಮ ದಿನದ ನಿನ್ನೆ (ಜೂನ್ 29) ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗಗಳಿಂದ ನಿರೀಕ್ಷೆಗೂ ಮೀರಿ ಜನ ಬಂದಿದ್ದರು. ಹೀಗಾಗಿ ಜನಸಂದಣಿಯಲ್ಲಿ 6 ಮಂದಿ ಓಡಾಡಲಾಗದೇ ನಿತ್ರಾಣಗೊಂಡಿದ್ದಾರೆ. ಅವರಲ್ಲಿ ಇಬ್ಬರಿಗೆ  ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದ್ದು ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಉಳಿದ ನಾಲ್ವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳು ಹರಡದಂತೆ ಹಾಗೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದಾಗಿ ವಿನಂತಿಸಿದ್ದಾರೆ.

- Advertisement -
spot_img

Latest News

error: Content is protected !!