Saturday, June 27, 2026
Homeಕರಾವಳಿಕಾರವಾರ: ಆಹಾರ ಅರಸಿ ರಸ್ತೆಯಲ್ಲಿ ವಾಕಿಂಗ್ ಬಂದ ಮೊಸಳೆ!!

ಕಾರವಾರ: ಆಹಾರ ಅರಸಿ ರಸ್ತೆಯಲ್ಲಿ ವಾಕಿಂಗ್ ಬಂದ ಮೊಸಳೆ!!

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ದೊಡ್ಡ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿತು. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಮೊಸಳೆಯನ್ನು ಕಂಡು ಸಾರ್ವಜನಿಕರು ಗಾಬರಿಯಾದರು.

ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಮೊಸಳೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ. ರಸ್ತೆಯುದ್ದಕ್ಕೂ ಸಂಚರಿಸಿದ ಮೊಸಳೆ ಯಾರಿಗೂ, ಯಾವುದೇ ಸಾಕುಪ್ರಾಣಿಗಳಿಗೂ ತೊಂದರೆ ಮಾಡಲಿಲ್ಲ.

ಇನ್ನು ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ದಾಂಡೇಲಿಯಲ್ಲಿ ಮೊಸಲೆ ಪಾರ್ಕ್ ಕೂಡ ಇದೆ. ಆದರೆ ಇದೇ ಮೊದಲ ಬಾರಿ ಮೊಸಳೆ ನದಿಯನ್ನು ಬಿಟ್ಟು ಗ್ರಾಮಕ್ಕೆ ಆಗಮಿಸಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

- Advertisement -

Latest News

error: Content is protected !!