Wednesday, September 9, 2026
Homeತಾಜಾ ಸುದ್ದಿಆನ್‌ಲೈನ್ ಮುಖಾಂತರ ಐದೇ ನಿಮಿಷದಲ್ಲಿ ಸಾಲ-ಆನ್‌ಲೈನ್ ಸಾಲ ಆಪ್‌ ಗಳ ವಿರುದ್ದ ಕ್ರಿಮಿನಲ್ ದಾವೆ

ಆನ್‌ಲೈನ್ ಮುಖಾಂತರ ಐದೇ ನಿಮಿಷದಲ್ಲಿ ಸಾಲ-ಆನ್‌ಲೈನ್ ಸಾಲ ಆಪ್‌ ಗಳ ವಿರುದ್ದ ಕ್ರಿಮಿನಲ್ ದಾವೆ

- Advertisement -
- Advertisement -

ಬೆಂಗಳೂರು: ಆನ್‌ಲೈನ್ ಮುಖಾಂತರ ಕೇವಲ ಐದೇ ನಿಮಿಷದಲ್ಲಿ ಸಾಲ ನೀಡುತ್ತೇವೆ ಎಂದು ಹೇಳಿಕೊಂಡು ಮೀಟರ್ ಬಡ್ಡಿ ವಸೂಲಿ ಮಾಡುವ ಆನ್‌ಲೈನ್ ಆಪ್‌ ಗಳ ವಿರುದ್ದ ಸಿಸಿಬಿ ಸೈಬರ್ ಪೊಲೀಸ್ ಠಾಣೆ ತೊಡೆತಟ್ಟಿದೆ.ಕೇವಲ ಐದು ನಿಮಿಷದಲ್ಲಿ ಆನ್‌ಲೈನ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತೇವೆ. ಹೀಗೆ ಭಿನ್ನ ಅವಕಾಶ ನೀಡಿ ಆನ್ ಲೈನ್ ಮೂಲಕ ಸಾಲ ನೀಡಿದ ಆನ್‌ಲೈನ್ ಸಾಲ ಆಪ್‌ ಗಳ ವಿರುದ್ದ ಈಗಾಗಲೇ ಕ್ರಿಮಿನಲ್ ದಾವೆಗಳು ದಾಖಲಾಗಿವೆ.

ಆನ್‌ ಲೈನ್ ಸಾಲ ಆಪ್‌ ಗಳ ತಂತ್ರಕ್ಕೆ ಹೆಚ್ಚುವರಿ ಬಡ್ಡಿ ವಸೂಲಿ, ಸಾಲ ಪಾವತಿಸದವರಿಗೆ ಬೆದರಿಕೆ ಹೀಗೆ ನಾನಾ ಅಪರಾಧಗಳು ವರದಿಯಾಗುತ್ತಿವೆ.ಮನಸೋ ಇಚ್ಛೆ ಬಡ್ಡಿ ವಿಧಿಸುತ್ತಿರುವ ಈ ದಂಧೆ ಈಗ ಸಾಕಷ್ಟು ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ಕಡಿವಾಣ ಹಾಕಲು ಮುಂದಾಗಿದೆ. ರಾಜಧಾನಿಯಲ್ಲಿ ಇದೇ ಮೊದಲ ಭಾರಿಗೆ ಸಿಸಿಬಿ ಪೊಲೀಸರು ಸಾಲ ಕೊಡುವ ಆಪ್‌ ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!