- Advertisement -
![]()
- Advertisement -
ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ದನದ ಕೊಟ್ಟಿಗೆ ಕುಸಿದು ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ನಡೆದಿದೆ. ಬಸವೇಗೌಡ (65) ಮೃತ ದುರ್ದೈವಿಯಾಗಿದ್ದು, ಘಟನೆಯಲ್ಲಿ ಮೊಮ್ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದನಗಳಿಗೆ ಮೇವು ಹಾಕಲು ಹೋಗಿದ್ದಾಗ ಏಕಾಏಕಿ ಕೊಟ್ಟಿಗೆ ಕುಸಿದು ಬಿದ್ದಿದೆ. ಈ ವೇಳೆ ಗೋಡೆಗಳ ಅಡಿ ಸಿಲುಕಿಕೊಂಡು ಬಸವೇಗೌಡ ಪ್ರಾಣಬಿಟ್ಟಿದ್ದು, ವೃದ್ಧನ ಜೊತೆಗೆ ಮಣ್ಣಿನಡಿ ಸಿಲುಕಿ ಹಸು ಕೂಡಾ ಸಾವನ್ನಪ್ಪಿದೆ.
ಈ ವೇಳೆ ಅಜ್ಜನ ಜೊತೆಗಿದ್ದ ಮೊಮ್ಮಗ ರಮೇಶ್ ಬಚಾವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.
- Advertisement -


