ವಿಟ್ಲ : ಅಕ್ರಮವಾಗಿ ದನ ಕಡಿದು ದನದ ಮಾಂಸ ಮಾರಾಟ ಮಾಡುತ್ತಿದ್ದ ರಿಕ್ಷಾ ಹಾಗೂ ದನದ ಮಾಂಸವನ್ನು ಪೋಲೀಸರು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯ ವೇಳೆ ಆರೋಪಿ ಪರಾರಿಯಾಗಿದ್ದರು. ಸುಮಾರು 1.35 ಲಕ್ಷ ಮೌಲ್ಯದ ಸೊತ್ತುಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಿಕ್ಷಾ ಹಾಗೂ ರಿಕ್ಷಾದಲ್ಲಿದ್ದ 35 ಕೆ.ಜಿ.ದನದ ಮಾಂಸವನ್ನು ಪೋಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಶಾಲಾ ಬಳಿ ಯಲ್ಲಿ ವಿಟ್ಲ ಪೋಲೀಸರು ರೌಂಡ್ಸನಲ್ಲಿರುವ ಪೋಲೀಸರು ವಾಹನ ತಪಾಸಣೆ ನಡೆಸುವ ವೇಳೆ ರಿಕ್ಷಾ ಚಾಲಕನೋರ್ವ ರಿಕ್ಷಾ ನಿಲ್ಲಿಸಿ ಪರಾರರಿಯಾಗಿದ್ದಾನೆ.
ಆತನ ರಿಕ್ಷಾವನ್ನು ಪರಿಶೀಲಿಸಿದಾಗ ರಿಕ್ಷಾ ದಲ್ಲಿ ಅಕ್ರಮವಾಗಿ ದನವನ್ನು ವದೆ ಮಾಡಿ ಬಳಿಕ ಮಾಂಸವನ್ನು ಪ್ಲಾಸ್ಟಿಕ್ ಚೀಲ ದಲ್ಲಿ ತುಂಬಿಸಿ ಮಾರಾಟ ಮಾಡಲು ಹೊರಟಿರುವ ಬಗ್ಗೆ ಪೋಲೀಸರು ಶಂಕಿಸಿದ್ದಾರೆ.
ವಿಟ್ಲ ಎಸ್.ಐ.ವಿನೋದ್ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿದೆ.