Friday, June 5, 2026
Homeಇತರಕೊರೋನಾ ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ :...

ಕೊರೋನಾ ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ : ಏಮ್ಸ್ ಮುಖ್ಯಸ್ಥ ಗುಲೇರಿಯಾ

- Advertisement -
- Advertisement -

ನವದೆಹಲಿ: ಭಾರತಕ್ಕೆ ಕೊರೋನಾ ವೈರಸ್ ಸಾಂಕ್ರಾಮಿಕದ ಮೂರನೇ ಅಲೆ ಖಚಿತವಾಗಿದ್ದು, ಮುಂದಿನ 6 ರಿಂದ 8 ವಾರಗಳಲ್ಲಿ 3ನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್ ಮುಖ್ಯಸ್ಥ ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಅವರು ಇಂದು ಖಾಸಗಿ ವಾಹಿನಿಯೊಂದಕ್ಕೆ ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ.“ನಾವು ಅನ್ ಲಾಕ್ ಮಾಡಲು ಪ್ರಾರಂಭಿಸಿದಂತೆ, ಮತ್ತೆ ಕೋವಿಡ್ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿಲ್ಲ. ಮೊದಲ ಮತ್ತು ಎರಡನೆಯ ಅಲೆಯ ನಡುವೆ ಏನಾಯಿತು ಎಂಬುದನ್ನು ನಾವು ಕಲಿತಂತೆ ಕಾಣುತ್ತಿಲ್ಲ. ಮತ್ತೆ ಜನಸಂದಣಿ ಹೆಚ್ಚುತ್ತಿದೆ, ಜನರು ಸೇರುತ್ತಿದ್ದಾರೆ” ಎಂದರು.

ಮೂರನೇ ಅಲೆ ಮುಂದಿನ ಆರರಿಂದ ಎಂಟು ವಾರಗಳಲ್ಲಿ ಕಾಣಿಸಿಕೊಳ್ಳಬಹುದು. ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಮೂರನೇ ಅಲೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಡಾ.ಗುಲೇರಿಯಾ ಹೇಳಿದರು.

ಸೂಕ್ತ ಮುನ್ನೆಚ್ಚರಿಕೆ ಮತ್ತು ಜನಸಂದಣಿಯನ್ನು ತಡೆಯುವಲ್ಲಿ ನಾವು ಹೇಗೆ ಸಫಲವಾಗುತ್ತೇತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ” ಎಂದು ಅವರು ಹೇಳಿದರು.

- Advertisement -

Latest News

error: Content is protected !!