Friday, October 4, 2024
Homeಕರಾವಳಿಕೊರೊನಾ ಆಸ್ಪತ್ರೆಯಾಗಿ ಪರಿವರ್ತನೆಯಾದ ಕಾಸರಗೋಡು ವೈದ್ಯಕೀಯ ಕಾಲೇಜು

ಕೊರೊನಾ ಆಸ್ಪತ್ರೆಯಾಗಿ ಪರಿವರ್ತನೆಯಾದ ಕಾಸರಗೋಡು ವೈದ್ಯಕೀಯ ಕಾಲೇಜು

spot_img
- Advertisement -
- Advertisement -

ಕಾಸರಗೋಡು: ಕೇರಳದ ರಾಜ್ಯದಲ್ಲೇ ಅತೀ ಹೆಚ್ಚು ಕೊರೋನಾ ವೈರಸ್ ದೃಢಪಟ್ಟಿರುವ ಕಾಸರಗೋಡು ಜಿಲ್ಲೆಯ ಬಗ್ಗೆ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಉಕ್ಕಿನಡ್ಕದಲ್ಲಿ ನಿರ್ಮಾಣಗೊಂಡಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡವನ್ನು ಕೊರೋನಾ ಆಸ್ಪತ್ರೆಯಾಗಿ ಪರಿವರ್ತಿಸಿದ್ದು, ಇಂದಿನಿಂದ ಕಾರ್ಯಾರಂಭಗೊಳ್ಳಲಿದೆ.

ಆಸ್ಪತ್ರೆಗೆ 26 ಸದಸ್ಯರನ್ನು ಒಳಗೊಂಡ ವೈದ್ಯಕೀಯ ತಂಡವನ್ನು ನೇಮಿಸಲಾಗಿದೆ. ತಂಡದಲ್ಲಿ ಹತ್ತು ಮಂದಿ ವೈದ್ಯರು, ಹತ್ತು ಮಂದಿ ದಾದಿಯರು, ಐವರು ಮೆಡಿಕಲ್ ಅಸಿಸ್ಟೆಂಟ್ ಒಳಗೊಂಡಿದ್ದಾರೆ. ಆರಂಭ ಹಂತದಲ್ಲಿ 200 ಹಾಸಿಗೆ ಹಾಗೂ ಹತ್ತು ಐ.ಸಿ.ಯು ಘಟಕಗಳ ವ್ಯವಸ್ಥೆ ಮಾಡಲಾಗಿದೆ . ಮುಂದಿನ ದಿನಗಳಲ್ಲಿ ನೂರು ಹಾಸಿಗೆ ಮತ್ತು ಹತ್ತು ಐ.ಸಿ.ಯು ಘಟಕ ತೆರೆಯಲಾಗುವುದು. ಸುಮಾರು ಏಳು ಕೋಟಿ ರೂ.ಗಳಷ್ಟು ವೆಚ್ಚದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ.

ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೆ.ಎಸ್.ಇ.ಬಿ ಹತ್ತು ಕೋಟಿ ರೂ.ಗಳ ಅನುದಾನ ನೀಡುವ ಭರವಸೆ ನೀಡಿದೆ. ವೈದ್ಯರು, ಹೆಡ್ ನರ್ಸ್, ಸ್ಟಾಫ್ ನರ್ಸ್, ನರ್ಸಿಂಗ್ ಅಸಿಸ್ಟೆಂಟ್ ಸೇರಿದಂತೆ ಹದಿನೇಳರಷ್ಟು ಸಿಬಂದಿಗಳನ್ನು ನೇಮಿಸಲಾಗುವುದು
ಜಿಲ್ಲಾಧಿಕಾರಿ ಡಾ .ಡಿ.ಸಜಿತ್ ಬಾಬು, ರಾಷ್ಟ್ರೀಯ ಆರೋಗ್ಯ ಯೋಜನೆ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮ ಸ್ವಾತಿ ವಾಮನ್ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.

- Advertisement -
spot_img

Latest News

error: Content is protected !!