Wednesday, June 3, 2026
Homeಕರಾವಳಿಉಡುಪಿಕಾರ್ಕಳ: 60 ಅಡಿ ಆಳದ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ

ಕಾರ್ಕಳ: 60 ಅಡಿ ಆಳದ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ

- Advertisement -
- Advertisement -

ಕಾರ್ಕಳ: 60 ಅಡಿ ಆಳದ ಬಾವಿಗೆ ಬಿದ್ದ ದಂಪತಿಯನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಕಲ್ಲೊಟ್ಟೆ ಪೆರ್ವಜೆ ಎಂಬಲ್ಲಿ ನಡೆದಿದೆ. ಕಲ್ಲೊಟ್ಟೆ ಪೆರ್ವಜೆ ರಸ್ತೆಯ ನಿವಾಸಿಗಳಾದ ಅನಿತಾ ಮಲ್ಯ (57) ಹಾಗೂ ಆಕೆ ಗಂಡ ಅಣ್ಣಪ್ಪ ಮಲ್ಯ (59) ಬಾವಿಗೆ ಬಿದ್ದ ದಂಪತಿ.


ಸುಮಾರು 60 ಅಡಿ ಆಳದ ಹಾಗೂ 20 ಅಡಿ ನೀರಿರುವ ಬಾವಿಗೆ ಅನಿತಾ ಮಲ್ಯ ಬೆಳಿಗ್ಗೆ ಆಕಸ್ಮಿಕವಾಗಿ ಬಿದ್ದಿದ್ದರು. ಅವರನ್ನು ರಕ್ಷಿಸಲು ಗಂಡ ಅದೇ ಬಾವಿಗೆ ಇಳಿದಿದ್ದರು ಎನ್ನಲಾಗಿದೆ. ನೀರಿನ ಮಟ್ಟದಲ್ಲಿ ಪಂಪ್ ಪೈಪ್ ಹಿಡಿದು ಅಪಾಯದಲ್ಲಿದ್ದ ಮಹಿಳೆ ಹಾಗೂ ಅವರ ಗಂಡನನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವರು ತಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ ಜೀವ ಉಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಧಿಕಾರಿಯವರಾದ ಆಲ್ಬರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರ ಶೇಖರ್ ಸಿಬ್ಬಂದಿಯವರಾದ ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಹಸನ್ ಮುಲ್ತಾನಿ, ರವಿಚಂದ್ರ ಕೊರವರ ಭಾಗವಹಿಸಿದ್ದರು.

- Advertisement -

Latest News

error: Content is protected !!