ಮುಂಬಯಿ: ಮಹಾರಾಷ್ಟ್ರ ರಾಜಧಾನಿಯಲ್ಲಿ 5 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಹಿನ್ನೆಲೆ ಇಂತಹ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಧೈರ್ಯ ತುಂಬಲು ಸ್ವತ: ಮುಂಬಯಿ ಮೇಯರ್ ನರ್ಸ್ ಉಡುಪು ತೊಟ್ಟು ಹಲವರಿಗೆ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ನರ್ಸ್ ಆಗಿದ್ದ ಕಿಶೋರಿ ಪೆಡ್ನೇಕರ್ ಮತ್ತೆ ನರ್ಸ್ ಉಡುಪು ತೊಟ್ಟು ಬಿಎಂಸಿಯ ನಾಯರ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಈ ಮೂಲಕ ಕೊರೊನ ವೈರಸ್ ಸೋಂಕಿತರನ್ನು ಗುಣಮುಖರನ್ನಾಗಿಸಲು ಸತತವಾಗಿ ದುಡಿಯುತ್ತಿರುವ ನರ್ಸ್‌ಗಳಿಗೆ ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ಮಾನಸಿಕವಾಗಿ ಬೆಂಬಲ ನೀಡಲು ಮುಂಬಯಿ ಮೇಯರ್ ನರ್ಸ್ ಉಡುಪು ತೊಟ್ಟು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇನ್ನು, ಮುಂಬಯಿಯಲ್ಲಿದ್ದ 1036 ಕಂಟೈನ್‌ಮೆಂಟ್ ಝೋನ್‌ಗಳ ಪೈಕಿ 231 ಝೋನ್‌ಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಬೆಂಬಲ ನೀಡಲು ಇಚ್ಚಿಸುತ್ತೇನೆ ಎಂದು ಮುಂಬಯಿ ಮಹಾನಗರದ ಮೇಯರ್ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28 ಸಾವಿರದ ಗಡಿ ಸಮೀಪಿಸಿದ್ದು, ಈ ಪೈಕಿ 20 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಾಗಿವೆ. ಇನ್ನು, ಕೋವಿಡ್ 19ಗೆ 872 ಜನರು ದೇಶದಲ್ಲಿ ಬಲಿಯಾಗಿದ್ದಾರೆ.