Saturday, June 13, 2026
Homeತಾಜಾ ಸುದ್ದಿಐಸ್‌ಕ್ರೀಂನಲ್ಲಿ ಕೊರೊನಾವೈರಸ್‌ ಪತ್ತೆ- ಒಂದು ಸಾವಿರ ಮಂದಿ ಕ್ವಾರಂಟೈನ್!..

ಐಸ್‌ಕ್ರೀಂನಲ್ಲಿ ಕೊರೊನಾವೈರಸ್‌ ಪತ್ತೆ- ಒಂದು ಸಾವಿರ ಮಂದಿ ಕ್ವಾರಂಟೈನ್!..

- Advertisement -
- Advertisement -

ಬೀಜಿಂಗ್: ಚೀನಾ ಪ್ರಪಂಚಕ್ಕೆ ಕೊರೋನಾ ವೈರಸ್ ಪರಿಚಯಿಸಿದ ದೇಶ.ಈಗ ಮತ್ತೆ ಸುದ್ದಿಯಲ್ಲಿದ್ದು ದೇಶದ ಈಶಾನ್ಯದಲ್ಲಿರುವ ಟಿಯಾಂಜಿನ್ ವ್ಯಾಪ್ತಿಯ ಐಸ್‌ಕ್ರೀಂನಲ್ಲಿ ಕೊರೊನಾವೈರಸ್‌ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಸಾವಿರ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಸ್ಥಳೀಯವಾಗಿ ತಯಾರಿಸಿದ ಐಸ್ ಕ್ರೀಂನ ಮೂರು ಮಾದರಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ. ಚೀನಾದಲ್ಲಿ ಐಸ್‌ಕ್ರೀಂ ನಲ್ಲಿ ಕೊರೊನಾ ವೈರಾಣು ಪತ್ತೆಯಾಗಿರುವ ಹಿನ್ನೆಲೆ ಇದೀಗ ಅಧಿಕಾರಿಗಳು ಐಸ್‌ಕ್ರೀಂ ತಿಂದವರಿಗಾಗಿ ಹುಡುಕಾಟ ನಡೆಸಿದ್ದಾರೆ.ಸಧ್ಯ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

- Advertisement -

Latest News

error: Content is protected !!