Sunday, June 7, 2026
Homeಕರಾವಳಿಉಡುಪಿಕರಾವಳಿಗೆ ಮಹಾ ಕಂಟಕ : ಉಡುಪಿಯ 25, ದ.ಕ 6 ಮಂದಿಗೆ ಕೊರೋನಾ ದೃಢ

ಕರಾವಳಿಗೆ ಮಹಾ ಕಂಟಕ : ಉಡುಪಿಯ 25, ದ.ಕ 6 ಮಂದಿಗೆ ಕೊರೋನಾ ದೃಢ

- Advertisement -
- Advertisement -

ಉಡುಪಿ: ಮಹಾರಾಷ್ಟ್ರದ ನಂಟು ಕೃಷ್ಣನಗರಿ ಉಡುಪಿಗೆ ದುಬಾರಿಯಾಗಿ ಪರಿಣಮಿಸಿದೆ. ಇಂದು ಸಹ ಕರಾವಳಿಗೆ ಕೊರೋನಾ ಆಘಾತ ನೀಡಿದ್ದು ಉಡುಪಿಯ 25 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 6 ಮಂದಿಗೆ ಇಂದು ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ 6 ಮಂದಿ ಕೂಡ ದುಬೈಯಿಂದ ಬಂದಿರುವವರು ಮತ್ತು ಉಡುಪಿಯ 25 ಮಂದಿಗೆ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವರದಿಯಾಗಿದೆ

ಕಳೆದ ಮಾ.29ರವರೆಗೆ ಉಡುಪಿಯಲ್ಲಿ ಕಾಣಿಸಿಕೊಂಡಿದ್ದು ಮೂರು ಕೊರೋನ ಪ್ರಕರಣಗಳು ಮಾತ್ರ. ಅನಂತರ ಮೇ 15ರವರೆಗೆ ಇಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿರಲಿಲ್ಲ. ಆದರೆ ಮೇ 15ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ 20ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿವೆ. ಆದರೆ ಇಂದು ಜಿಲ್ಲೆಯ 25 ಮಂದಿಗೆ ಕೊರೋನಾ ಸೋಂಕು ದೃಢವಾಗಿರುವ ಹಿನ್ನಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

- Advertisement -

Latest News

error: Content is protected !!