Sunday, May 19, 2024
Homeಕರಾವಳಿಕೊರೋನಾ ನಿಯಮ ಉಲ್ಲಂಘಸಿದ ಮದುವೆ ಹಾಲ್ ಮಾಲೀಕರಿಗೆ ಶಾಕ್ ಕೊಟ್ಟ ಮಂಗಳೂರು ಮಹಾನಗರಪಾಲಿಕೆ!

ಕೊರೋನಾ ನಿಯಮ ಉಲ್ಲಂಘಸಿದ ಮದುವೆ ಹಾಲ್ ಮಾಲೀಕರಿಗೆ ಶಾಕ್ ಕೊಟ್ಟ ಮಂಗಳೂರು ಮಹಾನಗರಪಾಲಿಕೆ!

spot_img
- Advertisement -
- Advertisement -

ಮಂಗಳೂರು: ಕೊರೋನಾ ನಿಯಮಾನುಸಾರ ಮದುವೆ ಸಮಾರಂಭಗಳಲ್ಲಿ 150 ಜನ ಮಾತ್ರ ಸೇರಬೇಕು, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯದಂತಹ ಕಾನೂನುಗಳಿದ್ದರೂ ಅವುಗಳನ್ನು ಗಾಳಿಗೆ ತೂರಿ ಮದುವೆ ನಡೆಸುತ್ತಿದ್ದ ಕಂಕನಾಡಿಯ ವೆಲೆನ್ಸಿಯಾ ಚರ್ಚ್ ಹಾಲ್ ನ ಆಡಳಿತ ವರ್ಗಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳು ದಂಡ ಹಾಕಿದ್ದಾರೆ.

ಚರ್ಚ್ ಹಾಲ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಲ್ಲದೆ, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ವಿಚಾರದಲ್ಲಿ ಪಾಲಿಕೆಯ ಅಧಿಕಾರಿಗಳು 5 ಸಾವಿರ ರೂ. ದಂಡ ಹಾಕಿದ್ದಾರೆ.

ಜನರ ತಪ್ಪೇ ಆಗಿದ್ದರೂ, ಸಂಬಂಧಪಟ್ಟ ಹಾಲ್ ನವರು ಈ ಬಗ್ಗೆ ಶಿಸ್ತು ರೂಪಿಸಬೇಕು, ಅಂತರ ಕಾಯ್ದುಕೊಂಡು ಚೇರ್ ಇರಿಸಬೇಕೆಂದು ಜಿಲ್ಲಾಧಿಕಾರಿಗಳು ನಿಯಮ ರೂಪಿಸಿದ್ದಾರೆ. ಅದರಂತೆ, ಸೀಮಿತ ಸಂಖ್ಯೆಯಲ್ಲಿ ಜನ ಸೇರಬೇಕು, ಎಲ್ಲರೂ ಮಾಸ್ಕ್ ಧರಿಸಿರಬೇಕು ಎಂಬ ಷರತ್ತುಗಳನ್ನೂ ಹೇರಲಾಗಿದೆ.

ಈ ಬಗ್ಗೆ ಸಂಬಂಧಪಟ್ಟವರಾಗಲೀ, ಮದುವೆ ನಡೆಸುವ ಪಾರ್ಟಿಯಾಗಲೀ ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ. ಕಂಕನಾಡಿಯ ಸಮೃದ್ಧಿ ಹಾಲ್ ನಲ್ಲಿ ಕೂಡ ಇದೇ ರೀತಿಯ ನಿಯಮ ಉಲ್ಲಂಘನೆಯಾಗಿದ್ದರಿಂದ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

- Advertisement -
spot_img

Latest News

error: Content is protected !!