Saturday, May 18, 2024
Homeಪ್ರಮುಖ-ಸುದ್ದಿಮತ್ತೊಂದು ಇಟಲಿಯಾಗ್ತಿದೆಯಾ ಕರ್ನಾಟಕ ? ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಗೆ ಕಾದು ಕಾದು ಕುಳಿತಲ್ಲೇ...

ಮತ್ತೊಂದು ಇಟಲಿಯಾಗ್ತಿದೆಯಾ ಕರ್ನಾಟಕ ? ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಗೆ ಕಾದು ಕಾದು ಕುಳಿತಲ್ಲೇ ಪ್ರಾಣ ಬಿಟ್ಟ ಕೊರೊನಾ ಸೋಂಕಿತ

spot_img
- Advertisement -
- Advertisement -

ಬೆಂಗಳೂರು   :  ಕರ್ನಾಟಕ ಮತ್ತೊಂದು ಇಟಲಿಯೋ ಇಲ್ಲಾ ಚೀನಾನೋ ಆಗುತ್ತೋ ಅನ್ನೋ ಆತಂಕ ಕಾಡೋದಕ್ಕೆ ಶುರುವಾಗಿದೆ. ಅದಕ್ಕೆ ಕಾರಣ ರಾಜ್ಯದಲ್ಲಿ ಕೊರೊನಾ ಸೋಂಕಿತರ ವಿಚಾರದಲ್ಲಿ ಪದೇ ಪದೇ ನಡೆಯುತ್ತಿರುವ ಅಮಾನವೀಯ ಘಟನೆ. ಇದೀಗ ಅತ್ಯಂತ ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ ಸಿಲಿಕಾನ್ ಸಿಟಿ ಬೆಂಗಳೂರು.

ಬೆಂಗಳೂರಿನ ಶ್ರೀನಗರದಲ್ಲಿ ಇವತ್ತು ಮನಕಲುಕುವ ಘಟನೆಯೊಂದು ನಡೆದಿದೆ. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬರು ಕಳೆದ ಮೂರು ದಿನಗಳ ಹಿಂದೆ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದರು. ಇವತ್ತು ಬೆಳಗ್ಗೆ ಅವರ ವರದಿ ಪಾಸಿಟಿವ್ ಬಂದಿದೆ. ವರದಿ ಬರ್ತಿದ್ದಂತೆ ಆಸ್ಪತ್ರೆಗೆ ಸೇರೋದಕ್ಕೆ ಮುಂದಾದ  ಆ ವ್ಯಕ್ಯಿ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.  ಜೊತೆಗೆ 15 ದಿನಕ್ಕೆ ಆಗುವಷ್ಟು ಬಟ್ಟೆ ಕೂಡ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ಆದರೆ ಸಂಜೆ 4 ಗಂಟೆಯಾದರೂ ಅವರನ್ನು ಕರೆದುಕೊಂಡು ಹೋಗೋದಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ.

   ಸುಮಾರು ಮೂರು ಗಂಟೆಗಶ ಕಾಲ ಮಳೆಯಲ್ಲಿಯೇ ನೆನೆಯುತ್ತಾ ಆ ವ್ಯಕ್ತಿ ಮನೆಯ ಮುಂದೆ ಕುಳಿತಿದ್ದಾರೆ. ಹಾಗೇ ಕೂತ ಸೋಂಕಿತ ವ್ಯಕ್ತಿ ಅಲ್ಲೇ  ಬಿದ್ದಿದ್ದಾರೆ.  ಕೂಡಲೇ ಅವರ ಕುಟುಂಬದವರು ಬಂದು ನೋಡಿದ್ದಾರೆ. ಅವರು ಉಸಿರಾಡದೆ ಇದ್ದಿದ್ದು ಕಂಡು ಮೃತ ಪಟ್ಟಿದ್ದು ಖಚಿತ ಪಡಿಸಿದ್ದಾರೆ ಕುಟಂಬಸ್ಥರು.  ಇಷ್ಟಾದರೂ ಈವರೆಗೂ ಯಾರೊಬ್ಬರೂ, ಸಿಬ್ಬಂದಿಯಾಗಲೀ, ಅಧಿಕಾರಿಗಳಾಗಲೀ  ಅತ್ತ ಸುಳಿದಿಲ್ಲ. ಶ್ರೀನಗರ, ರಾಮಾಂಜನೇಯ ದೇವಸ್ಥಾನದ ಬಳಿಯ ರಸ್ತೆ ಮೇಲೆ ಮೃತ ದೇಹ ಇಟ್ಟು ಕಣ್ಣೀರು ಹಾಕುತ್ತಿದ್ದಾರೆ ಕುಟುಂಬಸ್ಥರು.

- Advertisement -
spot_img

Latest News

error: Content is protected !!