Saturday, June 6, 2026
Homeಕರಾವಳಿಉಡುಪಿಕೊರೋನಾ ರಣಕೇಕೆ: ಇಂದು ಮತ್ತೆ ಉಡುಪಿಯಲ್ಲಿ 62 ಮಂದಿಗೆ ಸೋಂಕು ದೃಢ !

ಕೊರೋನಾ ರಣಕೇಕೆ: ಇಂದು ಮತ್ತೆ ಉಡುಪಿಯಲ್ಲಿ 62 ಮಂದಿಗೆ ಸೋಂಕು ದೃಢ !

- Advertisement -
- Advertisement -

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಪೋಟವಾಗಿದ್ದು, ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 62 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಬರೋಬ್ಬರಿ 267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಸೋಂಕಿತರಲ್ಲಿ 250 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದಾರೆ. ಇವತ್ತು 111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 1514 ಜನ ಬಿಡುಗಡೆಯಾದಂತಾಗಿದೆ.

ಜಿಲ್ಲಾವಾರು ವರದಿ:
ಕಲಬುರ್ಗಿ 105
ಉಡುಪಿ 62
ರಾಯಚೂರು 35
ಬೆಂಗಳೂರು 21
ಮಂಡ್ಯ 13
ಯಾದಗಿರಿ 09
ವಿಜಯಪುರ 06
ದಾವಣಗೆರೆ 03
ದಕ್ಷಿಣಕನ್ನಡ 02
ಮೈಸೂರು 02
ಬಾಗಲಕೋಟೆ 02
ಶಿವಮೊಗ್ಗ 02
ಕೋಲಾರ 02
ಬಳ್ಳಾರಿ 01
ಧಾರವಾಡ 01
ಹಾಸನ 01

- Advertisement -

Latest News

error: Content is protected !!