Sunday, June 7, 2026
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು 144 ಹೊಸ ಕೊರೊನಾ ಕೇಸು, ಉಡುಪಿಯಲ್ಲಿಂದು 250 ದಾಟಿದ ಸೋಂಕಿತರ ಸಂಖ್ಯೆ

ದಕ್ಷಿಣಕನ್ನಡದಲ್ಲಿಂದು 144 ಹೊಸ ಕೊರೊನಾ ಕೇಸು, ಉಡುಪಿಯಲ್ಲಿಂದು 250 ದಾಟಿದ ಸೋಂಕಿತರ ಸಂಖ್ಯೆ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡದಲ್ಲಿಂದು 144 ಕೊರೊನಾ ಹೊಸ ಕೇಸುಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9017ಕ್ಕೇರಿದೆ. ಇನ್ನು ಇಂದು 8 ಜನ ಕೋವಿಡ್ ನಿಂದ ಸಾವನ್ನಪ್ಪುವ ಮೂಲಕ ಇದುವರೆಗೂ ಕೋವಿಡ್ ಗೆ ಬಲಿಯಾದವರ ಸಂಖ್ಯೆ 275ಕ್ಕೇರಿದೆ.ಸದ್ಯ ಜಿಲ್ಲೆಯಲ್ಲಿ 2095 ಪಾಸಿಟಿವ್ ಕೇಸುಗಳಿದ್ದು, 6645 ಮಂದಿ ಗುಣಮುಖರಾಗಿದ್ದಾರೆ. ಇವತ್ತು 209 ಜನ ಡಿಸ್ಚಾರ್ಜ್ ಆಗಿದ್ದಾರೆ.

ಉಡುಪಿಯಲ್ಲಿ ಇಂದು 268ಮಂದಿಯಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ ಎಂಟು ಸಾವಿರದ ಗಡಿದಾಟಿದ್ದು, 8242ನ್ನು ತಲುಪಿದೆ. ಇಂದು ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2653 ಪಾಸಿಟಿವ್ ಕೇಸುಗಳಿದ್ದು, 5509 ಮಂದಿ ಗುಣಮುಖರಾಗಿದ್ದಾರೆ. ಇಂದು 269 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೊರೊನಾದಿಂದ 80 ಜನ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!