Thursday, June 4, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು ದಾಖಲೆ ಬರೆದ ಕೊರೊನಾ, ಒಂದೇ ದಿನ 7,178 ಹೊಸ ಕೋವಿಡ್ ಪ್ರಕರಣಗಳು ಪತ್ತೆ

ರಾಜ್ಯದಲ್ಲಿಂದು ದಾಖಲೆ ಬರೆದ ಕೊರೊನಾ, ಒಂದೇ ದಿನ 7,178 ಹೊಸ ಕೋವಿಡ್ ಪ್ರಕರಣಗಳು ಪತ್ತೆ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ದಾಖಲೆ ನಿರ್ಮಿಸಿದೆ. ಒಂದೇ ದಿನ 7,178 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ. ಇನ್ನು ಇಂದು 93 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 79,765 ಸಕ್ರಿಯ ಪ್ರಕರಣಗಳಿದ್ದು, 89,238 ಮಂದಿ ಗುಣಮುಖರಾಗಿದ್ದಾರೆ. ಇಂದು 5,006 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೊರೊನಾಗೆ 3,091 ಮಂದಿ ಬಲಿಯಾಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿಂದು 2,665 ಹೊಸ ಪ್ರಕರಣಗಳು ಪತ್ತೆಯಾಗೋದರರ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 72,237ಕ್ಕೆ ಏರಿಕೆಯಾಗಿದೆ. ಹಾಗೇ 18 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ 33,726 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, 37,292 ಮಂದಿ ಗುಣಮುಖರಾಗಿದ್ದಾರೆ. ಇಂದು ಒಂದೇ ದಿನ 2,229 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ 1.218 ಮಂದಿ ಇದುವರೆಗೂ ಕೋವಿಡ್ ಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!